ಇತ್ತೀಚಿನ ಸುದ್ದಿ
Chikkamagaluru | ಮೂಡಿಗೆರೆ: ಹೃದಯಾಘಾತಕ್ಕೆ 27 ವರ್ಷದ ಯುವತಿ ಬಲಿ
06/07/2025, 11:22

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹೃದಯಾಘಾತದಿಂದ 27 ವರ್ಷದ ಯುವತಿ ಸಾವನ್ನಪ್ಪಿದ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದಲ್ಲಿ ನಡೆದಿದೆ.
ಮೀನಾಕ್ಷಿ (27) ಮೃತ ದುರ್ದೈವಿ ಆಗಿದ್ದಾರೆ.
ಯುವತಿ ಎದೆ ಉರಿ ಎಂದು ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ಬರುವಾಗಲೂ ಅರ್ಧ ಗಂಟೆ ಲೇಟ್ ಆಗಿತ್ತು. ಮಳೆಯಿಂದ ರಸ್ತೆಗೆ ಮರ ಬಿದ್ದು ಆಸ್ಪತ್ರೆಗೆ ಬರುವುದೂ ತಡವಾಗಿತ್ತು.
ಮೊನ್ನೆಯಿಂದಲೂ ಯುವತಿಯ ಆರೋಗ್ಯ ಸರಿ ಇರಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋ ಬಿಪಿ ಎಂದು ಹೇಳಿದ್ದರು.
ನಿನ್ನೆ ಎದೆ ಉರಿ ಜಾಸ್ತಿಯಾದ ಕಾರಣ ಆಸ್ಪತ್ರೆಗೆ ದಾಖಲಾಯಿತು. ಆಸ್ಪತ್ರೆಗೆ ಬರುವಷ್ಟರಲ್ಲೇ ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ್ದಾರೆ.