ಇತ್ತೀಚಿನ ಸುದ್ದಿ
Chikkamagaluru | ಕಾಶ್ಮೀರದಲ್ಲಿ ಉಗ್ರರ ದಾಳಿ: ಕೊಟ್ಟಿಗೆಹಾರ ಬಂದ್; ಅಂಗಡಿ-ಮುಂಗಟ್ಟು ಸ್ತಬ್ದ
05/05/2025, 10:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸುಹಾಸ್ ಶೆಟ್ಟಿ ಕೊಲೆ ಹಾಗೂ ಕಾಶ್ಮೀರದಲ್ಲಿ ಉಗ್ರರ ದಾಳಿ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಇಂದು ಕಾಫಿನಾಡಿನ ಕೊಟ್ಟಿಗೆಹಾರ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಬಂದ್ ನಡೆಸಲಾಯಿತು.
ಜಿಲ್ಲಾಡಳಿತದ ವಿರೋಧದ ನಡುವೆಯೂ ಸಂಘ ಪರಿವಾರದ ವತಿಯಿಂದ ಸ್ವಯಂಪ್ರೇರಿತ ಬಂದ್ ನಡೆಯುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸೇರಿದಂತೆ ಗಡಿ ಪ್ರದೇಶಗಳು ಸಂಪೂರ್ಣ ಸ್ಥಬ್ಧವಾಗಿದ್ದು, ಬೆಳಗ್ಗೆ 9 ಗಂಟೆಯಾಗಿದ್ದರೂ ಅಂಗಡಿ-ಮುಂಗಟ್ಟುಗಳು ತೆರೆಯದೇ ಉಳಿದಿವೆ. ಬಂದ್ ಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಬಂದ್ ಗೆ ಜಿಲ್ಲಾಡಳಿತ ನಿರ್ಣಯಾತ್ಮಕ ವಿರೋಧ ವ್ಯಕ್ತಪಡಿಸಿದರೂ, ಸ್ಥಳೀಯ ಸಂಘಟನೆಗಳು ಕಾನೂನು ಸುವ್ಯವಸ್ಥೆ ಬದಿಗೊತ್ತಿ ಬಂದ್ ಆಯೋಜಿಸಿದ್ದು, ಪರಿಸ್ಥಿತಿ ನಿಗಾವಹಿಸುವಲ್ಲಿ ಪೊಲೀಸರು ಮುತುವರ್ಜಿತ ಕ್ರಮ ಕೈಗೊಂಡಿದ್ದಾರೆ.