ಇತ್ತೀಚಿನ ಸುದ್ದಿ
Chikkamagaluru | ಜಯಪುರ ಅತ್ತಿಕುಡಿಗೆ ರಸ್ತೆ ಬದಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
02/05/2025, 15:34

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಜಯಪುರ ಸಮೀಪದ ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆತ್ತದಕೊಳಲು ಗ್ರಾಮದ ದೊಡ್ಡಬಿಳಾಲುವಿನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ವಾಹನದಲ್ಲಿ ಹೋಗುತ್ತಿದ್ದವರಿಗೆ ರಸ್ತೆ ಬದಿಯೆ ಚಿರತೆ ಕಂಡಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.
ರಾತ್ರಿ ಟಿಟಿ ವಾಹನದಲ್ಲಿ ಹೋಗುತ್ತಿದ್ದರಿಗೆ ಕಂಡಿದ್ದು ಅವರು ಮೊಬೈಲ್ ನಲ್ಲಿ ಚಿರತೆಯ ಪೋಟೋ ತೆಗೆದಿದ್ದು ಇದೀಗ ಎಲ್ಲೆಡೆ ಚಿರತೆಯ ಚಿತ್ರ ವೈರಲ್ ಆಗಿದೆ.
ಮೊದಲೇ ಹೊಂಡ ಗುಂಡಿ ಇರುವ ಈ ಗ್ರಾಮದ ರಸ್ತೆಯಲ್ಲಿ ಚಲಿಸುವುದೇ ದೊಡ್ಡ ಸವಾಲಾಗಿದ್ದು ಅದರಲ್ಲೂ ರಾತ್ರಿ ವೇಳೆ ಚಿರತೆ ಕಂಡಿದ್ದು ವಾಹನ ಸವಾರರು ವಾಹನ ಚಲಾಯಿಸಲು ಭಯ ಪಡುವ ಪರಿಸ್ಥಿತಿ ಎದುರಾಗಿದೆ.
ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.