ಇತ್ತೀಚಿನ ಸುದ್ದಿ
Chikkamagaluru | ಕೊಪ್ಪ: ಪ್ರೀತಿಗೆ ಅಡ್ಡಿಪಡಿಸಿದ ಯುವಕನಿಗೆ ಚೂರಿ ಇರಿದು ಬರ್ಬರ ಕೊಲೆ
20/11/2025, 21:04
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪ್ರೀತಿಗೆ ಅಡ್ಡಿಪಡಿಸಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಇನ್ನೋರ್ವ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಕೊಪ್ಪ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.
ರಾಜೇಶ್ (27) ಕೊಲೆಯಾದ ವ್ಯಕ್ತಿ. ವರುಣ್ ಕೊಲೆ ಮಾಡಿದ ಆರೋಪಿ.
ರಾಜೇಶ್ ಪತ್ನಿಯ ಸಹೋದರಿಯನ್ನು ವರುಣ್ ಪ್ರೀತಿಸುತ್ತಿದ್ದ. ಈ ಹಿಂದೆ ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇಂದು ಪತ್ನಿ ಮನೆಗೆ ಹೋಗಿದ್ದ ರಾಜೇಶ್ ನನ್ನು ವರುಣ್
ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬಾಳೆಹೊನ್ನೂರು ಸಮೀಪದ ಬಾಸಾಪುರದಿಂದ ಕಲ್ಕೆರೆ ಗ್ರಾಮಕ್ಕೆ ರಾಜೇಶ್ ಹೋಗಿದ್ದ.
ಚಾಕು ಇರಿತಕ್ಕೊಳಗಾದ ರಾಜೇಶ್ ನನ್ನು ಆಸ್ಪತ್ರೆಗೆ ರವಾನಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆರೋಪಿ
ವರುಣ್ ಕೊಪ್ಪ ತಾಲೂಕಿನ ಮಂಡಗದ್ದೆ ಮೂಲದವನು ಎಂದು ತಿಳಿದು ಬಂದಿದೆ.
ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












