ಇತ್ತೀಚಿನ ಸುದ್ದಿ
Chikkamagaluru | ಅಪ್ರಾಪ್ತ ವಯಸ್ಸಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಅಪಹರಣ: ಲವ್ ಜಿಹಾದ್ ಆರೋಪ
26/03/2025, 16:54

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ದಂದೂರು ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಅಪಹರಿಸಲಾಗಿದ್ದು, ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.
ಅಫ್ರೋಜ್ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋದ ಬಗ್ಗೆ ದೂರು ನೀಡಲಾಗಿದೆ.
ಪ್ರೀತಿ ಹೆಸರಲ್ಲಿ 17 ವರ್ಷದ ಬಾಲಕಿಯನ್ನು ಅಫ್ರೋಜ್ ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಹಾಸ್ಟೆಲ್ ನಲ್ಲಿದ್ದು ಪ್ಯಾರಾ ಮೆಡಿಕಲ್ ಓದುತ್ತಿದ್ದಳು. ಪೋಷಕರಿಗೆ ಅಫ್ರೋಜ್ ಎಂಬ ಯುವಕನ ಜೊತೆ ಆಕೆ ಓಡಾಡುತ್ತಿರುವ ಮಾಹಿತಿ ಲಭಿಸಿತ್ತು. ನಂತರ ಪೊಷಕರು ಆಕೆಯನ್ನು ಕಾಲೇಜು ಬಿಡಿಸಿ ಮನೆಗೆ ಕರೆತಂದು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು.
ಮೂರು ತಿಂಗಳಿಂದ ಬಾಲಕಿ ಸಂಬಂಧಿಕರ ಮನೆಯಲ್ಲಿದ್ದಳು. ಈ ನಡುವೆ ದೋರನಾಳು ಗ್ರಾಮದಲ್ಲಿ ಸಂಬಂಧಿಯೊಬ್ಬರು ಸಾವಿಗೀಡಾಗಿದ್ದು, ಮನೆಯವರು ಅಲ್ಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅಫ್ರೋಜ್ ಅಪ್ರಾಪ್ತೆಯನ್ನು ಮನೆಯಿಂದ ಅಪಹರಿಸಿಕೊಂಡೋಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಿಕ್ಕಮಗಳೂರು ಪೋಕ್ಸೋ ಕೋರ್ಟ್ ಗೆ ಹಾಜರು ಸಾಧ್ಯತೆ ಇದೆ.