2:23 PM Saturday26 - July 2025
ಬ್ರೇಕಿಂಗ್ ನ್ಯೂಸ್
Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ Kodagu | ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯು ಕಾಲೇಜುಗಳಿಗೆ… ಬಿಜೆಪಿ ನಡೆಸಿರುವ ಅಕ್ರಮವೇ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಎನ್ನುವ ಸತ್ಯ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಎಸ್ ಐಟಿಯಿಂದ ಹಿರಿಯ ಐಪಿಎಸ್ ಅಧಿಕಾರಿ ಸೌಮ್ಯಲತಾ… ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕಿಯ ಮೃತದೇಹ ಪತ್ತೆ: ಕೊಲೆ ಶಂಕೆ; ಕುಟುಂಬಸ್ಥರಿಂದ ದೂರು ಇಡೀ ಮಲೆನಾಡು ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಶಿವಮೊಗ್ಗ ಅಭಿವೃದ್ಧಿ: ಸಚಿವ ಡಾ.…

ಇತ್ತೀಚಿನ ಸುದ್ದಿ

ಚಿಕ್ಕಮಗಳೂರು: ಬೃಹತ್ ಮರ ಬಿದ್ದು ಹೆದ್ದಾರಿ ಸಂಚಾರ ಸ್ಥಗಿತ; ಕಿಮೀಗಟ್ಟಲೆ ಟ್ರಾಫಿಕ್ ಜಾಮ್

25/07/2025, 22:10

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಮುಂದುವರಿದಿದ್ದು, ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ಭಾರೀ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗುರುಳಿದ ಪರಿಣಾಮ ಸಂಚಾರ ಸ್ಥಗಿತಗೊಂಡಿದ್ದು, ಕಿಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.


ಬೃಹತ್ ಮರ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 174 ಬಂದ್ ಆಗಿ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನ ಸವಾರರ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಚಿಕ್ಕಮಗಳೂರಿನಿಂದ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಎಲ್ಲಾ ಮಾರ್ಗ ಬಂದ್ ಆಯಿತು.ಮರ ತೆರವು ಮಾಡಲು ಸ್ಥಳೀಯರು ಹರಸಾಹಸ ಪಡಬೇಕಾಯಿತು.
ಮರ ಬಿದ್ದ ಪರಿಣಾಮ ಕಂಬ ಮುರಿದು ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿತ್ತು. ಟ್ರಾಫಿಕ್ ನಿಯಂತ್ರಿಸಲು ಗ್ರಾಮಾಂತರ ಪೊಲೀಸರ ಹರಸಾಹಸ ಪಡಬೇಕಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು