ಇತ್ತೀಚಿನ ಸುದ್ದಿ
Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ
03/04/2025, 22:45

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡ ಮಲೆನಾಡು ಭಾಗದಲ್ಲಿ ಇದು ಭಾರೀ ಮಳೆಯಾಗಿದೆ. ಚಿಕ್ಕಮಗಳೂರು ಮತ್ತು ತರೀಕೆರೆ ತಾಲೂಕಿನಲ್ಲಿ ಭಾರೀ ವರ್ಷಧಾರೆಯಾಗಿದೆ.
ಸುಮಾರು ಒಂದು ತಾಸು ಧಾರಾಕಾರ ಮಳೆಯಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟಿಯಲ್ಲಿ ಅಬ್ಬರದ ಮಳೆಯಾಗಿದೆ. ಸಂಜೆ ಒಂದು ಗಂಟೆಗಳ ಕಾಲ ಕಳಸ ತಾಲೂಕಿನಲ್ಲೂ ಭಾರೀ ಮಳೆಯಾಗಿದೆ.
ಬೇಸಿಗೆಯಲ್ಲೇ ಮಳೆಗಾಲದಂತೆ ಸುರಿಯುತ್ತಿರೋ ಮಳೆ ಕಂಡು ಮಲೆನಾಡಿಗರಲ್ಲಿ ಭಯಭೀತರಾಗಿದ್ದಾರೆ.
ಮಳೆಗಾಲಕ್ಕೆ ವರುಣದೇವ ಕೈಕೊಡುತ್ತಾನಾ ಎಂಬ ಆತಂಕದಲ್ಲಿ ಮಲೆನಾಡಿನಲ್ಲಿ ನೆಲೆಸಿದೆ.