ಇತ್ತೀಚಿನ ಸುದ್ದಿ
Chikkamagaluru | ಸರಕಾರದ ಗ್ಯಾರಂಟಿಗಳಿಗೆ ಫೇಕ್ ಸರ್ಟಿಫಿಕೇಟ್ ಗಳಿಂದ ಸಮರ್ಥನೆ: ಸಿ.ಟಿ. ರವಿ ಆರೋಪ
18/10/2025, 22:07

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸರಕಾರದ ಗ್ಯಾರಂಟಿ ಗಳಿಗೆ ಫೇಕ್ ಸರ್ಟಿಫಿಕೇಟ್ ಗಳಿಂದ ಸಮರ್ಥನೆ ಮಾಡ ಹೊರಟಿದೆ.
ಟ್ರಾನ್ಸ್ ಪೋರ್ಟ್ ಡಿಪಾರ್ಟ್ ಮೆಂಟ್ ಲಂಡನ್ ಬುಕ್ ಆಫ್ ರೆಕಾರ್ಡ್ ಹೆಸರಿನಲ್ಲಿ ಫೇಕ್ ಸರ್ಟಿಫಿಕೇಟ್ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ಲಂಡನ್ ಬುಕ್ ಆಫ್ ರೆಕಾರ್ಡ್ ನ ಪ್ಲಾಟಿನಮ್ ಸರ್ಟಿಫಿಕೇಟ್ ಸಿಕ್ಕಿದೆ ಅಂತಾರೆ. ಹೆಸರು ಲಂಡನ್ ಅಂತಿದೆ, ಹೆಡ್ ಆಫೀಸ್ ಕ್ರುಯೇಶಿಯಾ ತೋರಿಸ್ತಿದೆ ಎಂದು ರಾಜ್ಯ
ಸರ್ಕಾರದ ವಿರುದ್ಧ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವ್ಯಂಗ್ಯವಾಡಿದರು.
5 ಸಾವಿರಕ್ಕೆ ಗೋಲ್ಡನ್, 6ಕ್ಕೆ ಡೈಮಂಡ್, 8ಕ್ಕೆ ಮತ್ತೊಂದು, 10 ಸಾವಿರ ಕೊಟ್ರೆ ಪ್ಲಾಟಿನಮ್ ಸರ್ಟಿಫಿಕೇಟ್ ಸಿಗುತ್ತೆ ಎಂದು ರವಿ ಟೀಕಿಸಿದ್ದಾರೆ.
ಜನ ಹಿಡಿ ಶಾಪ ಹಾಕುತ್ತಿದ್ದಾರೆ, ಇವ್ರು ಫೇಕ್ ಸರ್ಟಿಫಿಕೇಟ್ ಮೂಲಕ ಗುಲಾಮಗಿರಿಯ ಸಂಭ್ರಮದಲ್ಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನ ನಿಮಗೆ ಸರ್ಟಿಫಿಕೇಟ್ ಕೊಡಬೇಕು, ಚುನಾವಣೆ ಬಂದಾಗ ನಿಮ್ಮ ಹಣೆಬರಹ ಗೊತ್ತಾಗುತ್ತೆ. ಬೆಲೆಯೇರಿಕೆ, ಕೆಟ್ಟ ಆಡಳಿತ, ಗ್ಯಾರಂಟಿ ಮೆಚ್ಚಿದ್ದಾರೋ ಇಲ್ವೋ ಎಲೆಕ್ಷನ್ ಬರಲಿ ಗೊತ್ತಾಗುತ್ತೆ.
ನಿಮ್ಮ ಗ್ಯಾರೆಂಟಿ ಕೆಲಸ ಮಾಡಿದ್ರೆ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸೀಟು ನೀವೇ ಗೆಲ್ಲಬೇಕಿತ್ತು ಎಂದು ಅವರು ನುಡಿದರು.
ಲೋಕಸಭೆ ಚುನಾವಣೆಯ 29ರಲ್ಲಿ 9 ಗೆದ್ದು 19 ಕ್ಷೇತ್ರದಲ್ಲಿ ನೀವು ಸೋತಿದ್ದೀರಾ. ಲಂಡನ್ ಬುಕ್ ಆಫ್ ರೆಕಾರ್ಡ್ ಹೆಸರಲ್ಲಿ ಫೇಕ್ ಸರ್ಟಿಫಿಕೇಟ್ ಮಾಡಿದ್ದೀರಾ, ನಿಮಗೆ ಏನು ಹೇಳಬೇಕು. ನಿಮ್ಮ ಸರ್ಕಾರಕ್ಕೆ ನಾಚಿಕೆ-ಮಾನ- ಮರ್ಯಾದೆ ಏನೂ ಇಲ್ಲ, ಏನು ಹೇಳೋಣ.
ಯಾರಾದರೂ 10 ಸಾವಿರ ಕೊಟ್ಟು ಪ್ಲಾಟಿನಮ್ ಸರ್ಟಿಫಿಕೇಟ್ ತೆಗೆದುಕೊಳ್ಳಬಹುದು ಎಂದು
ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿದ್ದಾರೆ.