ಇತ್ತೀಚಿನ ಸುದ್ದಿ
Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ ಶರೀರ ಇಟ್ಟು ಪ್ರತಿಭಟನೆ
01/04/2025, 21:08

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸಾಲ ಮರು ಪಾವತಿ ಮಾಡದಿರುವ ಹಿನ್ನೆಲೆಯಲ್ಲಿ
ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆನ್ನಲಾದ ತರೀಕೆರೆ ತಾಲೂಕಿನ
ಹುಣಸಘಟ್ಟ ಗ್ರಾಮದ ರೈತ ಮಂಜಾ ನಾಯ್ಕ್ (45) ಅವರ ಪಾರ್ಥಿವ ಶರೀರವನ್ನು ಬ್ಯಾಂಕ್ ಮುಂಭಾಗದಲ್ಲಿಟ್ಟು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಮುಂದೆ ಆ್ಯಂಬ್ಯುಲೆನ್ಸ್ ನಿಲ್ಲಿಸಿ ಕುಟುಂಬಸ್ಥರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಬ್ಯಾಂಕ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಜ್ಜಂಪುರ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳ ಕಿರುಕುಳಕ್ಕೆ ನಿನ್ನೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಂಜಾ ನಾಯ್ಕ್ ಅವರು ಯೂನಿಯನ್ ಬ್ಯಾಂಕಿನಲ್ಲಿ 4.70 ಲಕ್ಷ ಸಾಲ ಮಾಡಿದ್ದರು.
ಸಾಲ ಮರು ಪಾವತಿಗಾಗಿ ಬ್ಯಾಂಕ್ ಸಿಬ್ಬಂದಿಗಳು
ಸಾರ್ವಜನಿಕ ಪ್ರದೇಶದಲ್ಲಿ ಕಿರುಕುಳ ನೀಡಿದ್ದಾರೆ ಎಂದು
ಆರೋಪಿಸಲಾಗಿದೆ.
ಪೊಲೀಸರ ಮನವೊಲಿಕೆ ಬಳಿಕ ಗ್ರಾಮಸ್ಥರು ಬ್ಯಾಂಕ್ ಎದುರುಗಡೆಯಿಂದ ಮೃತದೇಹವನ್ನು ತೆರವುಗೊಳಿಸಿದರು.