4:32 PM Sunday22 - December 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು…

ಇತ್ತೀಚಿನ ಸುದ್ದಿ

ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ

22/12/2024, 11:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info reporterarnataka@gmail.com

ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಬಳಿಕ ಜಿಲ್ಲೆಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಸ್ವಾಗತ ಕೋರಿದರು.
ಸಿ.ಟಿ.ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಅವರ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದ ಹಿನ್ನಲೆಯಲ್ಲಿ ಬಂಧನಕ್ಕೊಳಗಾಗಿದ್ದರು.
ತಾಲೂಕಿನ ಮಾಗಡಿ ಹ್ಯಾಂಡ್ ಪೋಸ್ಟ್ ಬಳಿ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ ಸ್ವಾಗತ ಕೋರಿ ಕಾರ್ಯಕರ್ತರು
ಸಂಭ್ರಮಿಸಿದರು.ಅಲ್ಲಿಂದ ನೆರವಾಗಿ ವಾಹನಗಳ ಮೂಲಕ ಆಜಾದ್ ಪಾರ್ಕ್ ನಲ್ಲಿ ಜೆಸಿಬಿ ಮೂಲಕ‌ ಪುಷ್ಪಾರ್ಚನೆ ಮಾಡಿ ಜೈಕಾರ ಹಾಕಿ ಸಂಭ್ರಮಿಸಿದರು.
ನಂತರ ಆಜಾದ್ ಪಾರ್ಕ್ ಮೂಲಕ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಹನುಮಂತಪ್ಪ ವೃತ್ತದಲ್ಲಿ ಬೃಹತ್ ಹೂವಿನ ಹಾರ ಹಾಕಿ ಸಂಭ್ರಮಿಸಿದರು.

ಸಿ.ಟಿ.ರವಿ ಅವರ ಆಗಮನದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೀಗಿ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಕಡೂರು, ತರೀಕೆರೆ, ಕೊಪ್ಪ, ನರಸಿಂಹರಾಜಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಯ ಸಾವಿರಾರು ಪೊಲೀಸರನ್ನು ನಗರದಲ್ಲಿ ನಿಯೋಜಿಸಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು