ಇತ್ತೀಚಿನ ಸುದ್ದಿ
Chikkamagaluru | ಅಜ್ಜಂಪುರ: ನಾಳೆ ಹಸೆಮಣೆ ಏರಲಿದ್ದ ಯುವತಿ ಹೃದಯಾಘಾತಕ್ಕೆ ದಾರುಣ ಬಲಿ
30/10/2025, 17:54
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ನಾಳೆ ಹಸೆಮಣೆ ಏರಲಿದ್ದ ಯುವತಿಯೊಬ್ಬಳು ಇಂದು ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ಲೋ ಬಿಪಿ ಹಾಗೂ ಹೃದಯಾಘಾತದಿಂದ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ 24 ವರ್ಷದ ಶೃತಿ ಮೃತಪಟ್ಟಿದ್ದಾರೆ. ದಿಲೀಪ್ ಎಂಬ ತರೀಕೆರೆ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












