ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಮಳೆಯ ರುದ್ರ ನರ್ತನಕ್ಕೆ ಸಾಲು ಸಾಲು ಮನೆ ಕುಸಿತ; ಹಲವು ಮನೆಗಳಿಗೆ ಹಾನಿ, ಅಪಾರ ಆಸ್ತಿ ನಷ್ಟ
15/07/2022, 23:31
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಮಳೆಯ ರೌದ್ರ ನರ್ತನ ಮುಂದುವರಿದಿದ್ದು, ಜಿಲ್ಲೆಯಲ್ಲಿ ಹಲವು ಮನೆಗಳು ಸಂಪೂರ್ಣ ನಾಶಗೊಂಡಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಬ್ಬರಿಗೆಯಲ್ಲಿ ಎರಡೇ ದಿನಗಳಲ್ಲಿ ಮತ್ತೊಂದು ಮನೆ ಕುಸಿದು ಬಿದ್ದಿದೆ. ಲಲಿತಾ ಮಂಜುನಾಥ ಎಂಬವರಿಗೆ ಸೇರಿದ ಮನೆ ಇದಾಗಿದೆ. ತರುವೆ ಗ್ರಾಮದಲ್ಲಿ ನಾರಾಯಣಮ್ಮ ಎಂಬುವರಿಗೆ ಸೇರಿದ ಮನೆ ಬಿರುಗಾಳಿ ಮಳೆಗೆ ಸಂಪೂರ್ಣ ಹಾನಿಗೀಡಾಗಿದೆ.
ಕೊಟ್ಟಿಗೆಹಾರದ ನಿಸರ್ಗ ಹೊಟೇಲ್ ನ ಬಾರಿ ಗಾಜಿನ ಮುಂಬಾಗಿಲು ಬಿದ್ದು ಪುಡಿಯಾಗಿದೆ. ರಾಮನಗರದಲ್ಲಿ ಮನೆ ಸಂಪೂರ್ಣ ನೆಲಸಮವಾಗಿದೆ. ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಮುನಾ ಎಂಬುವರ ಮನೆ ಮೇಲ್ಛಾವಣಿಯ ಹಂಚುಗಳು ಹಾನಿಗೊಳಗಾಗಿದೆ.
ಬಕ್ಕಿ ಗ್ರಾಮದಲ್ಲಿಯೂ ಮನೆಯೊಂದು ಹಾನಿಗೀಡಾಗಿದೆ.