ಇತ್ತೀಚಿನ ಸುದ್ದಿ
ಚಿಕ್ಕಮಗಳೂರಲ್ಲಿ ಎಸಿಬಿ ದಾಳಿ : ಪಿಡಬ್ಲ್ಯೂಡಿ ಎಂಜಿನಿಯರ್ ಮನೆಯಲ್ಲಿ ಚಿನ್ನದ ಗಟ್ಟಿ, ಬೆಳ್ಳಿ ಸೊತ್ತು, ನಗದು ಪತ್ತೆ
16/03/2022, 18:15
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಾಜ್ಯದ ಹಲವೆಡೆ ಇಂದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದ್ದು, ಚಿಕ್ಕಮಗಳೂರಿ ಗಾಂಧಿನಗರ ಬಡಾವಣೆಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ ವೇಳೆ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪಿಡಬ್ಲ್ಯೂಡಿ ಎಇಇ ಗವಿರಂಗಪ್ಪ ಮನೆಯಲ್ಲಿ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕಾರ್ಯಚರಣೆಯಲ್ಲಿ ಇಲ್ಲಿಯವರೆಗೂ ಚಿನ್ನದ ಗಟ್ಟಿ 750 ಗ್ರಾಂ, ಬೆಳ್ಳಿ 900, 2 ಲಕ್ಷದ 74 ಸಾವಿರ ನಗದು ಪತ್ತೆಯಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಬೆಳಗ್ಗೆ ಆರು ಗಂಟೆಯಿಂದ ದಾಳಿ ನಡೆಯುತ್ತಿದ್ದು. ನಾಳೆಯ ವರೆಗೂ ದಾಳಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.