ಇತ್ತೀಚಿನ ಸುದ್ದಿ
ಚೌಳೂರು ಶ್ರೀ ವೀರಭದ್ರೇಶ್ವರ ಜಾತ್ರೆ ರಥೋತ್ಸವ ಸಂಪನ್ನ: ಸೊಬನೇ ಪದ ಹಾಡುತ್ತಾ ರಥ ಎಳೆದ ಭಕ್ತ ಸಮೂಹ
04/01/2024, 21:29

ಮುರುಡೇ ಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚೌಳೂರು ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಇಂದು ಭಕ್ತರ ಸಮ್ಮುಖದಲ್ಲಿ ಸಕಲ ವೈಭವದೊಂದಿಗೆ ಸಂಭ್ರಮ- ಸಡಗರದಲ್ಲಿ ಅದ್ದೂರಿಯಾಗಿ ನಡೆಯಿತು.
ರಥ ಕಂಗೊಳಿಸುವ ತರಹ ಹೂವಿನ ಅಲಂಕಾರ ಮಾಡಲಾಯಿತು. ಡೊಳ್ಳು, ವಾದ್ಯ ಕುಣಿತ ಮಹಿಳೆಯರು ದೈವದ ಸೊಬನೇ ಪದಗಳನ್ನು ಹೇಳುತ್ತಾ ರಥ ಎಳೆದರು. ಮುಕ್ತಿ ಬಾವುಟ ಹರಾಜು ಒಂದು ಲಕ್ಷದ ಮೂವತ್ತು ಸಾವಿರಕ್ಕೆ ವಿ. ರಾಜಣ್ಣ ಅವರು ತಗೆದುಕೊಂಡರು.
ಈ ಜಾತ್ರೆಗೆ ಶಾಸಕ ಟಿ.ರಘುಮೂರ್ತಿ,ಪಂಚಾಯಿತಿಯ ಮುಖಂಡರುಗಳು, ಗಣ್ಯರಾದ ಶಶಿಧರ್ ಜಿ ಟಿ., ಪರಶುರಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಭಾಗಿಯಾದರು.