ಇತ್ತೀಚಿನ ಸುದ್ದಿ
ಚಾತುರ್ಮಾಸ ಪ್ರಯುಕ್ತ ಕಾಶೀ ಮಠಾಧೀಶರ ಪುರ ಪ್ರವೇಶ: ಮಂಗಳೂರಿನಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ
09/07/2022, 22:54

ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com): ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತಾಚರಣೆಯು ಜುಲೈ 18ರಿಂದ ಈ ಬಾರಿ ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಶ್ರೀಗಳವರ ಪುರ ಪ್ರವೇಶ ಶನಿವಾರ ನಗರದ ರಥಬೀದಿಯಲ್ಲಿ ನಡೆಯಿತು.
ಶ್ರೀಗಳವರು ಕೊಂಚಾಡಿ ಮೊಕ್ಕಾಂ ನಿಂದ ಆಗಮಿಸಿದ್ದು ಶ್ರೀಗಳವರಿಗೆ ಭವ್ಯ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಪುರ ಪ್ರವೇಶ ಕಾರ್ಯಕ್ರಮವು ಸ್ವದೇಶೀ ಸ್ಟೋರ್ಸ್ ಬಳಿಯಿಂದ ಪ್ರಾರಂಭಗೊಂಡು ಶ್ರೀ ದೇವಳದ ವರೆಗೆ ನಡೆಯಿತು. ಈ ಸಂದರ್ಭದಲ್ಲಿ ವಿಶೇಷ ಚಂಡೆವಾದನ, ವಾರ್ಕರಿ ತಂಡದಿಂದ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಬಳಿಕ ಶ್ರೀಗಳವರು ಶ್ರೀ ದೇವರ ದರ್ಶನ ಪಡೆದು , ದೇವಳದ ಆಡಳಿತ ಮಂಡಳಿ ಯ ಪದಾಧಿಕಾರಿಗಳು ಪಾದಪೂಜೆ ನೆರವೇರಿಸಿದರು .