7:05 PM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಚಟ್ನಿ ತರಹ ಮಡಿಕೇರಿ- ಚೆಟ್ಟಳ್ಳಿ ರಸ್ತೆ: ನಿರ್ಮಾಣಗೊಂಡು ಮೂರೇ ದಿನಗಳಲ್ಲಿ ಕುಸಿದು ಬಿದ್ದ ತಡೆಗೋಡೆ!

20/05/2022, 08:57

ಮಡಿಕೇರಿ (reporterkarnataka.com):ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆ ಪಾಳುಬಿದ್ದು ಈ ವರ್ಷದ ಮಳೆಗಾಲಕ್ಕೆ ಮೂರು ವರ್ಷಗಳೇ ಕಳೆದುಹೋಗಿದೆ. 

ಸಿದ್ದಾಪುರ ಹಾಗು ಚೆಟ್ಟಳ್ಳಿಯ ಪ್ರಯಾಣಿಕರು ಶಾಲಾ ಕಾಲೇಜು ಮಕ್ಕಳು, ನೌಕರರು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರತಿನಿತ್ಯ ಮಡಿಕೇರಿ ಕಡೆ ಪಯಣಿಸಬೇಕಾಗಿದೆ. ಬೆಳಿಗ್ಗೆ ಹೋದವರು ಸಂಜೆ ಹೊತ್ತಿಗೆ ಮನೆ ಸೇರುವುದೇ ಗ್ಯಾರೆಂಟಿಲ್ಲದಾಗಿದೆ. 


ಈ ವರ್ಷ ಹಲವಾರು ಕೋಟಿ ಹಣ ವ್ಯಯ ಮಾಡಿ ರಸ್ತೆಗೆ ಲೋಕಾಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಲಾಗಿದೆ. ಕೆಲಸ ಎಷ್ಟರಮಟ್ಟಿಗೆ ಕಳಪೆಯಾಗಿದೆ ಎಂದರೆ ತಡೆ ಗೋಡೆ ನಿರ್ಮಿಸಿದ ಮೂರು ದಿವಸಕ್ಕೆ ಕುಸಿಯಲು ಪ್ರಾರಂಭಿಸಿದೆ. ಈಗಾಗಲೇ ಮೊನ್ನೆಯಿಂದ ಸುರಿಯುತ್ತಿರುವ ಕೃತಿಕಾ ಮಳೆಗೆ ತಡೆಗೋಡೆ ಜೊತೆಯಲ್ಲಿಯೇ  ರಸ್ತೆಯು ಬಿರುಕುಬಿಟ್ಟಿದ್ದು ಕುಸಿಯಲು ಕಾಯುತಿದೆ. ಅದನ್ನು ಅರಿತ ಗುತ್ತಿಗೆದಾರರು ಜೆ. ಸಿ. ಬಿ. ಯಂತ್ರ ತಂದು ಮಣ್ಣು ಮುಚ್ಚಿ ಹೋಗಿದ್ದಾರೆ. 

ಅಂತೂ ಇಂತೂ ಲೋಕಾಪಯೋಗಿ ಅಭಿಯಂತರರು ಮತ್ತು ಗುತ್ತಿಗೆದಾರರು ತಮ್ಮ ತಟ್ಟೆಯಲ್ಲಿ *ಪಪ್ಪಡಂ*  *ಪಾಯಸಂ ಉಂಡು* ರಸ್ತೆಯಲ್ಲಿ ಅದನ್ನು ವಿಸರ್ಜಿಸಿದಂತೆ ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ತೆರಳುವ ವಾಹನ ಸವಾರರಿಗೆ ಅನುಭವವಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು