6:02 AM Sunday24 - August 2025
ಬ್ರೇಕಿಂಗ್ ನ್ಯೂಸ್
Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ!

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟಿಯಲ್ಲಿ ಸುಟ್ಟು ಕರಕಲಾದ ಕಾರು: ಜಾವಗಲ್ ಗೆ ತೆರಳುತ್ತಿದ್ದ ದೇರಳಕಟ್ಟೆಯ ಪ್ರಯಾಣಿಕರು

19/12/2021, 16:44

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ಕಾರೊಂದು ಸುಟ್ಟು ಕರಕಲಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಮಂಗಳೂರಿನ ದೇರಳಕಟ್ಟೆಯಿಂದ ಜಾವಗಲ್ ಗೆ ಪ್ರವಾಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಶನಿವಾರ ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಮಹೇಂದ್ರದ ಲೋಗೊ ಮಾತ್ರ ಕಾಣಿಸುತ್ತಿದೆ.

ಘಟನಾ ಸ್ಥಳಕ್ಕೆ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ಮತ್ತು ಪೊಲೀಸರು ತಕ್ಷಣ ಆಗಮಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು