1:29 AM Wednesday17 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟಿ ಆಯ್ತು, ಇದೀಗ ದೇವರಮನೆ ಗುಡ್ಡ ರಸ್ತೆ ಬದಿಯಲ್ಲೇ ಯುವಕರ ಡ್ಯಾನ್ಸ್: ಮೋಜು- ಮಸ್ತಿ!

16/08/2023, 14:56

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.ಕಂ

ಪ್ರವಾಸಿಗರು ಚಾರ್ಮಾಡಿ ಘಾಟ್‌ ನಲ್ಲಿ ರಸ್ತೆ ಬದಿ ಮೋಜು- ಮಸ್ತಿ ಮಾಡುವುದು ಇದೀಗ ಹಳೆಯ ವಿಷಯವಾದರೆ, ಇದೀಗ ಮೂಡಿಗೆರೆ ತಾಲೂಕಿನ ದೇವರಮನೆಗುಡ್ಡ ಸಮೀಪ ರಸ್ತೆ ಬದಿಯಲ್ಲಿ ಯುವಕರ ಗುಂಪಿನ ಡ್ಯಾನ್ಸ್ ಶುರುವಾಗಿದೆ.
ರಸ್ತೆ ಬದಿ ಬಿಯರ್ ಕುಡ್ಕಂಡು ಪ್ರವಾಸಿಗರ ಮೋಜು ಮಸ್ತಿ ಮಾಡಲಾರಂಭಿಸಿದ್ದಾರೆ.


ಕಾರಿನಲ್ಲಿ ಸಾಂಗ್ ಹಾಕಿಕೊಂಡು ಯುವಕರು ಕುಣಿದು ಕುಪ್ಪಳಿಸಿಸುತ್ತಾರೆ. ಐತಿಹಾಸಿಕ ಕಾಲಭೈರವೇಶ್ವರ ಸ್ವಾಮಿ ದೇಗುಲದ ಬಳಿಯೇ ಮದ್ಯ ಸೇವಿಸಿ ನೃತ್ಯ ನಡೆದಿದೆ. ಇದು
ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುವ ಸುಪ್ರಸಿದ್ಧ ತಾಣವಾಗಿದೆ.
ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಹಚ್ಚ ಹಸಿರ ಮುತ್ತೈದೆ ಸೊಬಗು ಇಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ.
ಮಕ್ಕಳ ಸಮೇತ ಫ್ಯಾಮಿಲಿಗಳು ಭೇಟಿ ನೀಡುವ ಸುಂದರ ಸೊಬಗಿನ ತಾಣವಾಗಿದೆ.
ಪ್ರವಾಸಿಗರ ವರ್ತನೆಯಿಂದ ಇತರೇ ಪ್ರವಾಸಿಗರಿಗೂ ಕಿರಿ-ಕಿರಿಯಾಗುತ್ತಿದೆ.
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳಿಯರು, ಪ್ರವಾಸಿಗರ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು