8:19 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

‘ಚಾರ್ಲಿ  777’: ವೂಟ್ ಸೆಲೆಕ್ಟಿನಲ್ಲಿ ನೋಡಿ ಆನಂದಿಸಿ!; ಜುಲೈ 29ರಿಂದ ಅಕಾಶ ಲಭ್ಯ!!

23/07/2022, 21:12

ಬೆಂಗಳೂರು(reporterkarnataka.com): ಇತ್ತೀಚಿಗೆ ತೆರೆಕಂಡು ಮನೆಮಾತಾದ ‘ಚಾರ್ಲಿ  777’ ಸಿನಿಮಾ ಇದೀಗ ನಿಮ್ಮ ಬಳಿಗೇ ಬರ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರವನ್ನು ನೀವು ಇದೇ ಜುಲೈ 29ರಿಂದ ವೂಟ್ ಸೆಲೆಕ್ಟಿನಲ್ಲಿ ನೋಡಿ ಆನಂದಿಸಬಹುದು.  

ನಾಯಿ ಮತ್ತು ಮನುಷ್ಯನ ಸಂಬಂಧ ಹನ್ನೆರಡು ಸಾವಿರ ವರ್ಷಗಳಷ್ಟು ಹಿಂದಿನದು ಅಂತಾರೆ. ಅಂತ ಮುದ್ದಾದ ನಾಯಿಯೊಂದರ ಸುತ್ತ ಹೆಣೆದ ಕತೆ ಚಾರ್ಲಿಯದು. ಚಿತ್ರದ ಟ್ರೇಲರ್ ಬಿಡುಗಡೆಯಾದ ದಿನದಿಂದ ಈ ನಾಯಿ ಕನ್ನಡಿಗರ ಮನಸೂರೆಗೊಂಡಿದೆ. ಇನ್ನುಮುಂದೆ ಈ ಮುದ್ದು ನಾಯಿಯ ತುಂಟಾಟಗಳನ್ನ ವೂಟ್ ಸೆಲೆಕ್ಟಿನಲ್ಲಿ ಬೇಕೆಂದಾಗ ನೋಡಲು ಸಾಧ್ಯವಾಗುವುದು ನಾಯಿಪ್ರೇಮಿಗಳಿಗೆ ಖುಷಿಯ ಸುದ್ದಿಯೇ.

ನಾಯಿಯೇ ಮುಖ್ಯಪಾತ್ರದಲ್ಲಿರುವ ‘ಚಾರ್ಲಿ’ಯಲ್ಲಿ ಧರ್ಮನ ಪಾತ್ರ ಮಾಡಿರುವ ನಟ ರಕ್ಷಿತ್ ಶೆಟ್ಟಿ ಹೇಳುವಂತೆ ಇದು ಅವರ ವೃತ್ತಿಜೀವನದಲ್ಲೇ ಅತ್ಯಂತ ಮುಖ್ಯ ಪಾತ್ರ. ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ಧರ್ಮರಾಯನ ಹಿಂದೆ ಸಾಗುವ ನಾಯಿಯನ್ನೂ ಈ ಕತೆ ನೆನಪಿಸುವುದು ವಿಶೇಷ.

ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ ಈ ಹೊಸ ಬಗೆಯ ಚಿತ್ರ ವೂಟ್ ಸೆಲೆಕ್ಟಿನ ಮುಖಾಂತರ ಮನೆಮನೆಗೂ ತಲುಪುತ್ತಿರುವ ಬಗ್ಗೆ ಚಿತ್ರದ ನಿರ್ದೇಶಕ ಕಿರಣ್ ರಾಜ್ ಮಾತನಾಡಿ, ಈ ಸಿನಿಮಾ ತಮಗೆ ಅತ್ಯಂತ ತೃಪ್ತಿ ತಂದಿದೆ ಎಂದರು.

ಪ್ರಾಣಿಗಳನ್ನು ಬೇರೆ ಬೇರೆ ರೀತಿ ಬಳಸಿಕೊಂಡಿರುವ ಸಿನಿಮಾಗಳು ಮೊದಲೂ ಬಂದಿವೆ. ಆದರೆ ಚಾರ್ಲಿ ಒಂದು ನಾಯಿಯ ಸುತ್ತವೇ ತಿರುಗುವ ಕತೆ. ಚಿತ್ರದ ನಾಯಕ   ಬಯಸದಿದ್ದರೂ ಅದು ಅವನ ಬಳಿ ಬಂದದ್ದು, ಕಿರಿಕಿರಿಯಿಂದ ಶುರುವಾದರೂ  ಅವರಿಬ್ಬರು ಒಬ್ಬರನ್ನೊಬ್ಬರು ಹಚ್ಚಿಕೊಂಡದ್ದು ಮತ್ತು ಮನಕರಗಿಸುವಂಥ ಅಂತ್ಯಗಳು ಚಾರ್ಲಿ ಸಿನಿಮಾವನ್ನು ಮರೆಯಲಾಗದ ಅನುಭವವಾಗಿಸಿವೆ.

ಮರೆಯಬೇಡಿ. ಜುಲೈ 29ರಿಂದ ನಿಮ್ಮ ವೂಟ್ ಸೆಲೆಕ್ಟಿನಲ್ಲಿ ಚಾರ್ಲಿ ಬರ್ತಿದೆ. ನೋಡಿಲ್ಲದವರಿಗೆ ರಸದೂಟ. ನೋಡಿರುವವರಿಗೆ ನಾಸ್ತಾಲ್ಜಿಯಾ.

ಇತ್ತೀಚಿನ ಸುದ್ದಿ

ಜಾಹೀರಾತು