ಇತ್ತೀಚಿನ ಸುದ್ದಿ
ಚಂದ್ರಯಾನ-3: ಸ್ಪೇಸ್ ಕ್ರಾಫ್ಟ್ ನಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಂ ಲ್ಯಾಂಡರ್; 23ರಂದು ಸಾಫ್ಟ್ ಲ್ಯಾಂಡಿಂಗ್
17/08/2023, 22:33
ಶ್ರೀಹರಿಕೋಟ(reporterkarnataka.com): ಚಂದ್ರಯಾನ-3 ಯಾತ್ರೆ ಮಹತ್ವದ ಹೆಜ್ಜೆ ಇಟ್ಟಿದ್ದು, ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿಯಾಗಿದೆ. ಸ್ಪೇಸ್ ಕ್ರಾಫ್ಟ್ ನಿಂದ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದೆ. ಆಗಸ್ಟ್ 23ರಂದು ಸ್ವಾಫ್ಟ್ ಲ್ಯಾಂಡಿಂಗ್ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಲ್ಯಾಂಡರ್ ಈಗಾಗಲೇ ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿದ್ದು, ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ನಾಳೆ ಸಂಜೆ ವೇಳೆಗೆ ಡೀ-ಬೂಸ್ಟಿಂಗ್ ನಡೆಯಲಿದ್ದು, ಲ್ಯಾಂಡರ್ ನ್ನು ಹಂತ ಹಂತವಾಗಿ ಚಂದ್ರನ ಮೇಲ್ಮೈ ಗೆ ಇಳಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಚಂದ್ರಯಾನ 3 ನೌಕೆ ಜುಲೈ 14ರಂದು ಉಡಾವಣೆಗೊಂಡು ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅದಾದ ಬಳಿಕ ಸತತ ಮೂರು ಕಕ್ಷೆ ಪರಿಚಲನೆ ಮೂಲಕ (ಆಗಸ್ಟ್ 6, 9 ಹಾಗೂ 14) ಚಂದ್ರನ ಮೇಲ್ಮೈಯ ಸನಿಹಕ್ಕೆ ತಲುಪಿದೆ. ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜಿಸಲಾಗಿದೆ.