4:05 AM Friday4 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 5 ಮಂದಿ ಪೊಲೀಸ್ ವಶಕ್ಕೆ

28/08/2021, 15:24

ಮೈಸೂರು(reporterkarnataka.com): ಇಲ್ಲಿನ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಗುಡ್ಡದ ಬಳಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಪತ್ತೆಗಾಗಿ ಮೈಸೂರು ನಗರ ಪೊಲೀಸರು 5 ತಂಡಗಳನ್ನು ರಚನೆ ಮಾಡಿ ಬಲೆ ಬೀಸಿದ್ದರು. ವಿದ್ಯಾರ್ಥಿನಿಯ ಸ್ನೇಹಿತ ಘಟನೆಗೆ ಸಂಬಂಧಿಸಿದಂತೆ ನೀಡಿದ

ಮಾಹಿತಿ ಮೇಲೆ ಹಾಗೂ ಮೊಬೈಲ್ ಟವರ್ ಆಧರಿಸಿ ಆರೋಪಿಗಳ ಜಾಡು ಪತ್ತೆ ಹಚ್ಚಿದ್ದಾರೆ.

ಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ತಮಿಳುನಾಡಿನ ಮೂವರು, ಕೇರಳದ ಓರ್ವ ಹಾಗೂ ಮೈಸೂರು ನಗರದ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 

ಸದ್ಯ ಆರೋಪಿಗಳನ್ನು ತಮಿಳುನಾಡು ಮತ್ತು ಕೇರಳದಿಂದ ಮೈಸೂರಿಗೆ ಕರೆದು ತರಲಾಗುವುದು.ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಸುಮಾರು 25 ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ. ಪೊಲೀಸರು ಸ್ಥಳದಲ್ಲಿ ದೊರಕಿದ ಮದ್ಯದ ಬಾಟಲಿಗಳ ಆಧಾರದ ಮೇಲೆ ಸುತ್ತಾ ಮುತ್ತ ಇರುವ ಮದ್ಯದಂಗಡಿ ಜಾಲಾಡಿ ಅಲ್ಲಿನ ಸಿಸಿ ಟಿವಿ ಫೊಟೇಜ್ ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು