ಇತ್ತೀಚಿನ ಸುದ್ದಿ
ಚಳ್ಳಕೆರೆ: ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಚಾಲಕ ಸಾವು; 2 ಮಂದಿ ಗಂಭೀರ
01/12/2021, 22:29

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಮಾರುಕಟ್ಟೆಗೆ ಶೇಂಗಾ ಸಾಗಾಟ ಮಾಡುತ್ತಿದ್ದ ಟಾಟಾ ಎಸಿಇ ಟೈರ್ ಸಿಡಿದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡ
ಘಟನೆ ತಳಕು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ತಳಕು ಹೋಬಳಿಯ ಬೇಡರಡ್ಡಿ ಹಳ್ಳಿಯಿಂದ ಟಾಟಾ ಎಸಿಸಿ ವಾಹನದಲ್ಲಿ ಶೇಂಗಾ ಸಾಗಾಟ ಮಾಡುತ್ತಿದ್ದಾಗ ಚಿಕ್ಕಮನ್ನನಹಳ್ಳಿ ಗ್ರಾಮದ ಸಮೀಪ ವಾಹನದ ಟೈರ್ ಸಿಡಿದು ಪಲ್ಟಿಯಾದ ಪರಿಣಾಮ ವಾಹನ ಚಾಲಕ ನಾಗರಾಜ್(42) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಕೇಶ್ ಹಾಗೂ ಓಬಣ್ಣ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪಿಎಸ್‍ಐ ಮಾರುತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.