6:30 PM Tuesday30 - December 2025
ಬ್ರೇಕಿಂಗ್ ನ್ಯೂಸ್
ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ

ಇತ್ತೀಚಿನ ಸುದ್ದಿ

ಚಳ್ಳಕೆರೆ: ನಾಯಕನಹಟ್ಟಿ ಕೆರೆಯಲ್ಲಿ ಅಕ್ರಮ ಶೆಡ್ ನಿರ್ಮಾಣ: ಸಣ್ಣ ನೀರಾವರಿ ಇಲಾಖೆಯಿಂದ ತೆರವು

05/02/2022, 11:54

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ನಾಯಕನಹಟ್ಡಿ ಕೆರೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ಅದನ್ನೇ ಪ್ರಾರ್ಥನಾ ಮಂದಿರ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆಯ ನೆರವಿನಿಂದ ಶೆಡ್ ತೆರವುಗೊಳಿಸಿದ್ದಾರೆ.ಚಳ್ಳಕೆರೆ ತಾಲೂಕಿನ ನಾಯಕನಹಟ್ಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ  ರಿ.ಸಂ ನಂ ೧೩೧ ರಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಸಣ್ಣಕೆರೆಯಲ್ಲಿ ಸುಮಾರು ಗುಂಟೆ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಪ್ರಾರ್ಥನಾ ಮಂದಿರ ನಿರ್ಮಿಸಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಯಲ್ಲಿ ತಹಶೀಲ್ದಾರ್ ಎನ್. ರಘುಮೂರ್ತಿ ಆದೇಶದಂತೆ ತೆರವು ಕಾರ್ಯ ನಡೆಯಿತು.


ಐತಿಹಾಸಿಕೆ ಸಣ್ಣ ಕೆರೆಯಲ್ಲಿ ಅಂದಾಜು ೫ ಗುಂಟೆ ವಿಸ್ತೀರ್ಣದಲ್ಲಿ ನಾಯಕನಹಟ್ಟಿ ಪಟ್ಟಣದ ರಮೇಶ್ ಪಾಲಯ್ಯ ಎನ್ನುವ ವ್ಯಕ್ತಿ ಕಳೆದ ಸುಮಾರು ದಿನಗಳಿಂದ ಅನಧಿಕೃತವಾಗಿ ಸೀಟಿನ ಸೆಡ್ಡು ನಿರ್ಮಿಸಿಕೊಂಡಿದ್ದು ಇವರು ಅನಧಿಕೃತವಾಗಿ ಒತ್ತುವರಿ ಮಾಡಿಸ್ದರು. ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಣ್ಣ ನೀರಾವರಿ ಇಲಾಖೆ ಯವರು ಪ್ರಸ್ತಾಪಿಸಿದ್ದು, ನ್ಯಾಯಾಲಯವು ಈ ಒತ್ತುವರಿ ತೆರವುಗೊಳಿಸುವಂತೆ ಆದೇಶ  ನೀಡಿತ್ತು.


ಆದರೆ ಶೆಡನ್ನು ಇದುವರೆಗೂ ತೆರವುಗೊಳಿಸಿರಲಿಲ್ಲ ಈ ಮಧ್ಯೆ ಈ ಸೀಟಿನ ಶೆಡ್ ನಲ್ಲಿ ಪ್ರಾರ್ಥನಾ  ಮಂದಿರ ತೆರೆಯಲಾಯಿತು. ಮತಾಂತರಕ್ಕೆ   ಪ್ರಚೋದನೆ ನೀಡಲು ಈ  ಶೆಡ್ ಬಳಕೆಯಾಗುತ್ತಿದೆ ಎಂದು ಸ್ಥಳೀಯರು ಸಣ್ಣ ನೀರಾವರಿ ಇಲಾಖೆಗೆ ಹಾಗೂ ಕಂದಾಯ ಇಲಾಖೆ ದೂರು ನೀಡಿದ್ದರು.

ಅಕ್ರಮವಾಗಿ ಚರ್ಚ್ ನಿರ್ಮಿಸಿಕೊಂಡ  ರಮೇಶ್‌ಗೆ ಕಂದಾಯ ಇಲಾಖೆಯಿಂದ ತಿಳುವಳಿಕೆ ನೋಟಿಸ್ ಜಾರಿ ಮಾಡಿದರೂ ತೆರವುಗೊಳಿಸಿದ ಹಿನ್ನೆಯಲ್ಲಿ ಸ್ಥಳಕ್ಕೆ  ತಹಶೀಲ್ದಾರ್ ಎನ್.ಎರಘುಮೂರ್ತಿ, ವೃತ್ತ ನಿರೀಕ್ಷಕ ರಮಕಾಂತ್ ತಳಕು, ಪಿಎಸ್‌ಐ  ಮಾರುತಿ ನಾಯಕನಹಟ್ಟಿ, ಪಿಎಸ್‌ಐ ಮಹೇಶ್, ಲಕ್ಷ್ಮಣ್ ಹೊಸಪೇಟೆ, ಎಎಸ್‌ಐ ನಾಗರಾಜ್, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್  ಚನ್ನಬಸಪ್ಪ, ರವಿಕುಮಾರ್, ಕೆರೆ ಪ್ರಾಧಿಕಾರ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ನಾಯಕನಹಟ್ಟಿ , ಪಟ್ಟಣ ಪಂಚಾಯಿತಿ ಪೌರಾಯುಕ್ತ ಕೋಡಿ ಭೀಮರಾವ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಅಕ್ರಮ ಚರ್ಚು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಯಂತ್ರಗಳ ಸಹಾದಿಂದ ನೆಲಸಮ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು