ಇತ್ತೀಚಿನ ಸುದ್ದಿ
ಚಳ್ಳಕೆರೆ: ಆಂಜನೇಯಸ್ವಾಮಿ ದೇವಸ್ಥಾನ ಅಮೃತ ಮಹೋತ್ಸವ; ಸಾಂಸ್ಕೃತಿಕ ಸಂಜೆ
08/02/2022, 12:54
ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಇತ್ತೀಚಿನ ದಿನಗಳಲ್ಲಿ ಟಿ.ವಿ.ಮೊಬೈಲ್ ಹಾವಳಿಗೆ ಸಿಲುಕಿ ಗ್ರಾಮೀಣ ಕಲೆ, ಸಂಸ್ಕೃತಿಗಳು ವಿನಾಶದ ಅಂಚಿಗೆ ತಲುಪುತ್ತಿದ್ದು ಅವುಗಳ ಉಳಿವಿಗಾಗಿ ಇಂತಹ ವೇಧಿಕಗಳ ಮೂಲಕ ನಾಡಿನ ಕಲೆ, ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡುವಂತೆ ಗ್ರಾಪಂ ಪಿಡಿಒ ಪಾಲಯ್ಯ ಹೇಳಿದರು.
ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಮೃತಮಹೋತ್ಸವ ಅಂಗವಾಗಿ ಕರ್ನಾಟಕ ಗಿಡ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ದತ್ತಗಾಯಿತ್ರಿ ಮಹಿಳಾ ಮಂಡಳಿ, ಆಂಜನೇಯಸ್ವಾಮಿ ಸೇವಾ ಸಮಿತಿವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿ ಸಂಜೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಿನ ಕಲೆ ಸಂಸ್ಕೃತಿ ಉಳಿಯ ಬೇಕಾದ ಮಹಿಳೆಯರಿಂದ ಮಾತ್ರ ಸಾಧ್ಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಹಳೆ ಹಾಗೂ ಯುವಕರಲ್ಲಿ ಕಲೆಯನ್ನು ಗುರುತಿಸಿ ಪ್ರೋತ್ಸಾ
ಹಿಸುವ ಮೂಲಕ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ಹೆಚ್ಚಿನ ಪ್ರಚಾರ ಮಾಡುವಂತೆ ತಿಳಿಸಿದರು.
ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರರೆಡ್ಡಿ ಮಾತನಾಡಿ ಭಜನೆ, ಕೋಲಾಟ, ಸೋಭಾನೆ, ದೇವರ ಪದಗಳು, ಸೇರಿದಂತೆ ಪೂರ್ವಜನರ ಉಳಿಸಿದ ಜನಪದಗಳು ಕಣ್ಮರೆಯಾಗುವ ಸಂದರ್ಭದಲ್ಲಿ ಗಡಿ ಸಂಸ್ಕೃತಿ ಮತ್ತು ಕಳೆ ಉಳಿದಿರುವುದು ಗ್ರಾಮೀಣ ಭಾಗದಲ್ಲಿ ಅದರಲಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಕಲೆ ಸಂಸ್ಕೃತಿ ಹಾಗೂ ಜಾನದಕ್ಕೆ ನೀಡಿರುವ ಕೊಡುಗೆ ಅಪಾರ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆ ಮತ್ತು ಕಲೆಯನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇಧಿಕೆ ಕಲ್ಪಿಸಿಕೊಟ್ಟಿದೆ ಹಾಗೂ ಮಹಿಳಾ ಸಬಲೀಕರಣ ಹಾಗೂ ಅಭ್ಯುದಯಕ್ಕಾಗಿ ಹಲವು ಕಾರ್ಯಕ್ರಮಗಳು ಮತ್ತು ಯೋಜನೆಯನ್ನು ರೂಪಿಸಿದ್ದ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ದತ್ತಗಾಯಿತ್ರಿ ಮಹಿಳಾ ಮಂಡಳಿ, ನೃತ್ಯ ನಿಕೇತನ ಸೇರಿದಂತೆ ವಿವಿಧ ಕಲಾತಂಡಗಳಿಂದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಕನ್ನಡ ಗೀತೆ ಗಾಯನ,ಸುಗಮ ಸಂಗೀತ, ಭರತನಾಟ್ಯ, ಹಿಂದೂಸ್ಥಾನಿ ಸಂಗೀತ, ಜಾನಪದ ಸಂಗೀತ, ವಚನ ಗಾಯನ ಜಾನಪದ ನೃತ್ಯ, ವಿವಿಧ ಭಾಗಗಳಿಂದ ಬಂದ ಮಹಿಳೆಯರು ಕಲೆ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿ ಉಪಾಧ್ಯಕ್ಷೆ ರಂಜಿತ್, ಸದಸ್ಯರಾದ ರಂಗನಾಥ್, ಹಂಪಣ್ಣ ಸಿದ್ದೇಶ್, ಸಂಜೀವಿನಿ ಲ್ಯಾಬ್ ಮೃತ್ಯುಂಜಯ, ಗಡಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸೌಂದರ್ಯ, ನೃತ್ಯನಿಕೇತನ ಸುಧಾಮೂರ್ತಿ, ವಿಷ್ಣುಮೂರ್ತಿರಾವ್, ಮುಖ್ಯ ಶಿಕ್ಷಕ ಸತ್ಯನಾರಣರಾವ್, ಇತರರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಿಲಾಯಿತು.