5:14 AM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಚಲನಚಿತ್ರೋದ್ಯಮ ಕುಸಿಯುತ್ತಿರುವಾಗ ʻಪಯಣ್ʼ ಶತದಿನಗಳ ಪ್ರದರ್ಶನ ಕಂಡಿರುವುದು ಆಶಾದಾಯಕ ಬೆಳವಣಿಗೆ: ಐವನ್ ಡಿʼಸೋಜ

02/01/2025, 12:00

ಮಂಗಳೂರು(reporterkarnataka.com):ʻಇಡೀ ವಿಶ್ವಾದ್ಯಂತ ಚಲನ ಚಿತ್ರೋದ್ಯಮವು ಕುಸಿತ ಕಂಡಿರುವಾಗ ಕೊಂಕಣಿ ಭಾಷೆಯ ಪ್ರಾದೇಶಿಕ ಚಿತ್ರವೊಂದು 100 ದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಸೀಮಿತ ಮಾರುಕಟ್ಟೆ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಕೊಂಕಣಿಯಲ್ಲಿ ಚಲನಚಿತ್ರಗಳನ್ನು ತಯಾರಿಸುವುದು ಯಾವುದೇ ಲಾಭದ ನಿರೀಕ್ಷೆಯಿಂದಲ್ಲ, ವಿನಃ ಮಾತೃಭಾಷೆಯ ಮೇಲಿನ ಪ್ರೇಮದಿಂದ. ʻಪಯಣ್ʼ ಕೊಂಕಣಿಯಲ್ಲಿ ಇದುವರೆಗೆ ಬಂದಂತಹ ಎಲ್ಲಾ ಚಿತ್ರಗಳಿಗಿಂತ ಭಿನ್ನವಾಗಿದ್ದು, ಧನಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವ ಕಲಾತ್ಮಕ ಚಿತ್ರವಾಗಿ ಮೂಡಿ ಬಂದಿದೆ. ಅದಕ್ಕಾಗಿ ನಾವು ʻಸಂಗೀತ್ ಘರ್ ಪ್ರೊಡಕ್ಷನ್ಸ್ʼ ಜೋಡಿ ಮೆಲ್ವಿನ್ ಪೆರಿಸ್ ಮತ್ತು ನೀಟ ಪೆರಿಸ್ ಅವರನ್ನು ಖಂಡಿತವಾಗಿಯೂ ಅಭಿನಂದಿಸಬೇಕುʼಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜ ಹೇಳಿದರು.


ಅವರು ನಗರದ ಬಿಜೈನಲ್ಲಿರುವ ಭಾರತ್ ಸಿನೇಮಾದಲ್ಲಿ ʻಪಯಣ್ʼ ಕೊಂಕಣಿ ಚಲನಚಿತ್ರದ ಶತದಿನೋತ್ಸವ ಸಂಭ್ರಮಾಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ವಿದ್ಯಾ ಸಂಸ್ಥೆಗಳ ರೆಕ್ಟರ್ ವಂ| ಫಾ| ಮೆಲ್ವಿನ್ ಜೋಸೆಫ್ ಪಿಂಟೊ, ಅನಿವಾಸಿ ಉಧ್ಯಮಿ ಜೇಮ್ಸ್ ಮೆಂಡೊನ್ಸಾ ಮತ್ತು ದಾಖಲೆ ನಿರ್ಮಿಸಿದ ʻಅಸ್ಮಿತಾಯ್ʼ ಕೊಂಕಣಿ ಚಿತ್ರ ನಿರ್ಮಾಪಕ, ʻಮಾಂಡ್ ಸೊಭಾಣ್ʼ ಸಂಸ್ಥೆಯ ಅಧ್ಯಕ್ಷರಾದ ಲುವಿ ಪಿಂಟೊ ಗೌರವ ಅಥಿತಿಳಾಗಿ ಹಾಜರಿದ್ದರು. ಪಯಣ್ ಸಿನಿಮಾ ನಿರ್ದೇಶಕ ʻಸಂಗೀತ್ ಗುರುʼ ಜೊಯೆಲ್ ಪಿರೇರಾ ವೇದಿಕೆಯಲ್ಲಿ ಹಾಜರಿದ್ದರು.
ಕೊಂಕಣಿಯ ಖ್ಯಾತ ಗಾಯಕ, ಪಯಣ್ ಚಲನಚಿತ್ರದ ನಿರ್ಮಾಪಕ ಮೆಲ್ವಿನ್ ಪೆರಿಸ್ರವರು ಚಲನಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲಾ ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ವೀಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸಿನಿಮಾ ನಟ, ಸಂಯೋಜಕ, ಸಂಘಟಕ ಲೆಸ್ಲಿ ರೇಗೊ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ʻಆಂಜೆಲೊರ್ ಕೊಯರ್ʼ ಪಂಗಡದವರು ಕ್ರಿಸ್ಮಸ್ ಹಾಡೊಂದನ್ನು ಹಾಡಿ ಟಾಕಿಸಿನಲ್ಲಿ ಕ್ರಿಸ್ಮಸ್ ಕಳೆ ತಂದರು. ಕಾರ್ಯಕ್ರಮದ ಕೊನೆಯಲ್ಲಿ ತುಂಬಿದ ಚಿತ್ರಮಂದಿರದಲ್ಲಿ ʻಪಯಣ್ʼ ಸಿನಿಮಾದ ಕೊನೆಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು