ಇತ್ತೀಚಿನ ಸುದ್ದಿ
ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಗಗನ್ ಕಡೂರು ಮನೆಯಲ್ಲಿ ಸ್ಥಳ ಮಹಜರು, ಎಚ್ ಡಿಎಫ್ ಸಿ ಬ್ಯಾಂಕ್ ಖಾತೆ ಪರಿಶೀಲನೆ
19/09/2023, 22:22
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚೈತ್ರಾ ಕುಂದಾಪುರ ಡೀಲ್ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಆಗಿರುವ ಗಗನ್ ಕಡೂರು ಅವರನ್ನು ಸಿಸಿಬಿ ಪೊಲೀಸರು ಸ್ಥಳ ಮಹಜರಿಗೆ ಮಂಗಳವಾರ ಕಡೂರಿಗೆ ಕರೆತಂದರು.
ಗಗನ್ ಮನೆಯಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು. ರಮೇಶ್ ಗೆ ವಿಶ್ವನಾಥ್ ಜೀ ಆಗಲು ಟ್ರೈನಿಂಗ್ ನೀಡಿದ್ದೇ ಇದೇ
ಗಗನ್ ಮನೆಯಲ್ಲಿ. ಗಗನ್ ಮನೆಯಲ್ಲಿ ವಿಚಾರಣೆ ಹಾಗೂ ಸ್ಪಾಟ್ ಮಹಜರ್ ಮಾಡಿದರು.
ಕಡೂರು ಪಟ್ಟಣದ ಫಾರೆಸ್ಟ್ ಆಫೀಸ್ ಬಳಿ ಗಗನ್ ಮನೆ ಇದೆ
ಜಿಲ್ಲೆಯ ವಿವಿಧ ಕಡೆ ಸ್ಥಳ ಮಹಜರು ಸಿಸಿಬಿ ಪೊಲೀಸರು ನಡೆಸಿದರು.
ಚಿಕ್ಕಮಗಳೂರು ಐಬಿ, ಕಡೂರಿನ ಕನಕ ವೃತ್ತದ ಬಳಿ ಇರುವ ಗಗನ್ ಮನೆ, ಕೆ.ಎಂ.ರಸ್ತೆಯಲ್ಲಿರುವ ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಸ್ಥಳ ಮಹಜರು ನಡೆಸಲಾಯಿತು.
ಎಚ್ ಡಿಎಫ್ ಸಿ ಬ್ಯಾಂಕಿನ ಅಕೌಂಟ್ ಪರಿಶೀಲನೆ ನಡೆಸಲಾಯಿತು. ಅಕೌಂಟ್ ನಲ್ಲಿ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.
ನಂತರ ಎಪಿಎಂಸಿ, ಪ್ರವಾಸಿ ಮಂದಿರ ಸ್ಥಳಗಳಲ್ಲಿ ಮಹಜರು
ನಡೆಸಲಾಯಿತು. ದೊಡ್ಡಪೇಟೆಯಲ್ಲಿರುವ ಕಟಿಂಗ್ ಶಾಪ್ ಗೂ ಪೊಲೀಸರು ತೆರಳಲಿದರು.
ನಂತರ ಸಿಸಿಬಿ ಪೊಲೀಸರ ತಂಡ ಮತ್ತೆ ಶಿವಮೊಗ್ಗಕ್ಕೆ ತೆರಳಿತು.