ಇತ್ತೀಚಿನ ಸುದ್ದಿ
ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಚಿಕ್ಕಮಗಳೂರು ಐಬಿಯಲ್ಲಿ ಮಾಸ್ಟರ್ ಮೈಂಡ್ ಗಗನ್ ಕಡೂರು ಸ್ಥಳ ಮಹಜರು
19/09/2023, 17:44
ಚಿಕ್ಕಮಗಳೂರು(reporterkarnataka.com): ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಪ್ರಕರಣದ ಮಾಸ್ಟರ್ ಮೈಂಡ್ ಗಗನ್ ಕಡೂರು ಅವರನ್ನು ಸಿಸಿಬಿ ಪೊಲೀಸರು ಚಿಕ್ಕಮಗಳೂರು ಐಬಿಗೆ ಕರೆದು ತಂದಿದ್ದಾರೆ.
ಸಿಸಿಬಿ ಪೊಲೀಸರಿಂದ ಚಿಕ್ಕಮಗಳೂರಿನಲ್ಲಿ ತನಿಖೆ ನಡೆಯುತ್ತಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ 7 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಲೂಟಿಕೋರ ಗ್ಯಾಂಗ್ ಚಿಕ್ಕಮಗಳೂರು ಐಬಿಯಲ್ಲಿ ಎರಡನೇ ಮಿಟಿಂಗ್ ನಡೆಸಿತ್ತು. ಪ್ರವಾಸಿ ಮಂದಿರಲ್ಲಿ ಉದ್ಯಮಿ ವಿಶ್ವನಾಥ್ ಜೀ ಅವರನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ ಚೈತ್ರಾ ಗ್ಯಾಂಗ್ ಭೇಟಿ ಮಾಡಿಸಿತ್ತು.
ಸ್ಥಳ ಪರಿಶೀಲನೆಗೆ ಗಗನ್ ಕಡೂರುನನ್ನು ಸಿಸಿಬಿ ಪೊಲೀಸರು ಐಬಿಗೆ ಕರೆದುಕೊಂಡು ಬಂದಿದ್ದಾರೆ.
ಕಡೂರು ಗಗನ ಮನೆಗೂ ಸಿಸಿಬಿ ತಂಡ ತೆರಳಲಿದೆ.