ಇತ್ತೀಚಿನ ಸುದ್ದಿ
ಕೇಂದ್ರ ಸರಕಾರದ ಭಾರತ್ ರೈಸ್ ಮಾರಾಟ ತಾತ್ಕಾಲಿಕ ಸ್ಥಗಿತ: ಭಾರೀ ಬೇಡಿಕೆಯಿತ್ತು ಕೆಜಿಗೆ 29 ರೂ.ಗೆ ಸಿಗುತ್ತಿದ್ದ ಅಕ್ಕಿಗೆ
04/07/2024, 17:14

ನವದೆಹಲಿ(reporterkarnataka.com): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಎಲ್ಲಾ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸುವ ನಿಟ್ಟಿನಲ್ಲಿ ಕಳೆದ ಫೆಬ್ರವರಿಯಲ್ಲಿ ಆರಂಭಿಸಿದ್ದ ಭಾರತ್ ರೈಸ್ ಅಕ್ಕಿ ಮಾರಾಟವನ್ನು ಜುಲೈ ತಿಂಗಳಿನಿಂದ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಕೆಜಿಗೆ 29 ರೂ.ಗಳ ಈ ಅಕ್ಕಿಗೆ ಬಹಳ ಬೇಡಿಕೆ ಇತ್ತು. ಆಧಾರ್ ಕಾರ್ಡ್ ನಂಬರ್ ಹೇಳಿ 10 ಕೆಜಿಯ ಅಕ್ಕಿ ಬ್ಯಾಗನ್ನು ಪಡೆಯಬಹುದಾಗಿತ್ತು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಅಕ್ಕಿ ಮತದಾರರನ್ನು ಸೆಳೆದಿತ್ತು. 29 ರೂ.ಗೆ 1 ಕೆಜಿ ಅಕ್ಕಿ, 27.50 ರೂ.ಗೆ 1 ಕೆಜಿ ಗೋಧಿ ಹಿಟ್ಟು, 60 ರೂ.ಗೆ 1 ಕೆಜಿ ಕಡಲೆ ಬೆಳೆ ಮಾರಾಟ ಮಾಡಲಾಗುತ್ತಿತ್ತು.
ಮೊಬೈಲ್ ವ್ಯಾನ್ ಮೂಲಕ ಅಕ್ಕಿ, ಬೇಳೆಯನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಕೇಂದ್ರ ಸರಕಾರದ ಪ್ರಕಾರ ದಾಸ್ತಾನುಗಳು ಈಗ ಮುಗಿದಿದ್ದು, ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ.
ಇದುವರೆಗೂ 5 ಸಾವಿರ ಟನ್ ಭಾರತ್ ರೈಸ್ ಮಾರಾಟ ಮಾಡಲಾಗಿದೆ.