7:37 PM Friday23 - January 2026
ಬ್ರೇಕಿಂಗ್ ನ್ಯೂಸ್
ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು

ಇತ್ತೀಚಿನ ಸುದ್ದಿ

‘ಕಾಸ್ಕ್’ ಸಂಸ್ಥೆಯಿಂದ ಮಂಗಳೂರು ಫಳ್ನೀರ್ ನ ಮದರ್ ತೆರೇಸಾ ಹೋಮ್ ನಲ್ಲಿ ಆರೋಗ್ಯ ತಪಾಸಣಾ ಶಿಬಿರ

13/11/2024, 15:30

ಮಂಗಳೂರು(reporterkarnataka.com): ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ‘ಕಾಸ್ಕ್’ ಸಂಸ್ಥೆಯಿಂದ ಆರೋಗ್ಯ ತಪಾಸಣಾ ಶಿಬಿರವು ನವೆಂಬರ್ 10ರಂದು ಜರಗಿತು.
ಈ ಕಾರ್ಯಕ್ರಮವು ನಗರದ ಫಳ್ನೀರ್’ನಲ್ಲಿರುವ ಮದರ್ ತೆರೇಸಾ ಹೋಂನಲ್ಲಿ, ಕಣಚೂರು ಆಸ್ಪತ್ರೆಯ ಸಹಯೋಗದಲ್ಲಿ ನಡೆಯಿತು.
‘ಕಾಸ್ಕ್’ ಉಪಾಧ್ಯಕ್ಷರಾದ ಡಾ. ರೋಹನ್ ಮೋನಿಸ್ ಮತ್ತು ಮಾರ್ಜೋರಿ ಟೆಕ್ಸೇರಾ ಶಿಬಿರದ ನೇತೃತ್ವ ವಹಿಸಿದ್ದರು.
ಕಣಚೂರು ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು ಮತ್ತು ಸಿಬ್ಬಂದಿಯ ತಂಡ 48 ಹಿರಿಯ ನಿವಾಸಿಗಳು ಮತ್ತು 13 ಜನ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಮತ್ತು ಸಮಾಲೋಚನೆಗಳನ್ನು ನೀಡಿತು. ಇದರ ಜೊತೆಗೆ ಶಿಬಿರದಲ್ಲಿನ ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತ ಔಷಧಗಳನ್ನು ನೀಡಲಾಯಿತು. ನಿವಾಸಿಗಳ ಪೈಕಿ ಕೆಲವರಿಗೆ ಕಣ್ಣಿನ ಪೊರೆಯ ಸಮಸ್ಯೆಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಗುರುತಿಸಲಾಯಿತು.
ಕಣಚೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಅಬ್ದುಲ್ ರಹಮಾನ್, ‘ಕಾಸ್ಕ್’ ಅಧ್ಯಕ್ಷ ರೋನಾಲ್ಡ್ ಗೋಮ್ಸ್, ಮದರ್ ತೆರೇಸಾ ಹೋಮ್, ಫಳ್ನೀರ್‌ನ ಮದರ್ ಸುಪೀರಿಯರ್ ಸಿಸ್ಟರ್ ಯೇಸು ತೆರೇಸಾ ಸೇರಿದಂತೆ ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಕಾಸ್ಕ್’ ಕೋಶಾಧಿಕಾರಿ ರೊನಾಲ್ಡ್ ಮೆಂಡೊನ್ಸಾ, ಕಾರ್ಯದರ್ಶಿ ಪೀಟರ್ ಪಿಂಟೊ, ಸಮಿತಿ ಸದಸ್ಯರಾದ ಪ್ರೊಫೆಸರ್ ಜೆರಾರ್ಡ್ ಡಿ’ಸೋಜಾ, ಇಯಾನ್ ಲೋಬೊ, ಮಾರ್ಸೆಲ್ ಮೊಂತೇರೊ, ಡಾ. ಹೆನ್ರಿಕ್ ಲೋಬೊ, ಡಾ. ಎರಿಕ್ ಲೋಬೊ, ಸದಸ್ಯರಾದ ಅನಿತಾ ಗೋಮ್ಸ್ ಮತ್ತು ನೀನಾ ಮೊಂತೇರೊ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು