ಇತ್ತೀಚಿನ ಸುದ್ದಿ
ಪ್ರಧಾನಿಯ ಅವಾಚ್ಯ ಪದಗಳಿಂದ ಅವಹೇಳನ ಪ್ರಕರಣ: ಮಡಿಕೇರಿಯ ಸ್ಪೈಸಸ್ ಅಂಗಡಿಯ ಮೂವರು ಯುವಕರ ಬಂಧನ
11/12/2025, 10:34
*ಪೊಲೀಸರಿಂದ ಸುಮುಟೊ ಕೇಸ್ ದಾಖಲು*
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿಯ ಸ್ಪೈಸಸ್ ಅಂಗಡಿಯಲ್ಲಿ ಮೂವರು ದೇಶದ ಪ್ರಧಾನಿ ಮೋದಿ ಅವರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇವರ ವಿರುದ್ಧ ಸುಮೊಟೋ ಕೇಶ್ ದಾಖಲಿಸಿ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಡಿಕೇರಿಯ ರಾಣಿ ಪೇಟೆಯ ನಿವಾಸಿ ಇಬ್ರಾಹಿಂ ಎಂಬುವರ ಪುತ್ರ ಫಹಾದ್ ಎಮ್ಮ. ಇ, (31) ತ್ಯಾಗರಾಜ ಕಾಲನಿಯ ನಿವಾಸಿ ಹುಸಿನ್ ಎಂಬುವರ ಪುತ್ರ ಬಾಸಿಲ್ ಎಂ ಎಚ್ (29) ಹಾಗೂ ತ್ಯಾಗರಾಜ ಕಾಲೋನಿಯ ನಿವಾಸಿಯಾದ ಮಜಿದ್ ಎಂಬ ಅವರ ಪುತ್ರ ಸಮೀರ್ ಎಂ.ಎಂ (31) ಬಂಧಿತ ಆರೋಪಿಗಳಾಗಿದ್ದಾರೆ.
ಮೋದಿ ಅವರ ನಿಂದನೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.
*ಬಿಜೆಪಿ ಪ್ರತಿಭಟನೆ:* ಘಟನೆ ಖಂಡಿಸಿ ಜಿಲ್ಲಾ ಬಿಜೆಪಿ ನಾಳೆ ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ಜಿ . ಟಿ. ವೃತ್ತದಲ್ಲಿ ಪ್ರತಿಭಟನೆಗೆ ಮುಂದಾಗಿದೆ.
ಮೋದಿ ಅವರನ್ನು ನಿಂದಿಸಿದ ಪ್ರಕರಣ ಖಂಡಿಸಿ ಅನೇಕರು ಹೇಳಿಕೆ ನೀಡಿದ್ದಾರೆ.












