4:51 AM Tuesday13 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಕಾರು ಅಡ್ಡಗಟ್ಟಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಕೊಲೆ ಬೆದರಿಕೆ: ಆರೋಪಿ ಶಂಶುದ್ದೀನ್ ಬಂಧನ

17/07/2022, 11:58

ಮಂಗಳೂರು( reporterkaranataka.com): ನಗರದ ಹೊರವಲಯದ ತುಂಬೆ ಬಳಿ ದ.ಕ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರಿನ ಗಾಜು ಪುಡಿಮಾಡಿ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನಿಂದ ಪುತ್ತೂರಿಗೆ ಜಿಲ್ಲಾ ಪಂಚಾಯಿತಿ ವಾಹನ ವೊಂದರಲ್ಲಿ ಚಾಲಕ ದೇವದಾಸ್ ಅವರು ಅಧಿಕಾರಿಗಳನ್ನು ಕರೆದ್ಯೋತ್ತಿದ್ದರು. ಆ ವೇಳೆ ತುಂಬೆ ಸಮೀಪ ಜಿಲ್ಲಾ ಪಂಚಾಯಿತಿ ಕಾರಿನ ಮುಂಭಾಗದ ವಾಹನ ಬ್ರೇಕ್ ಹಾಕಿದ್ದಾರೆ. ಅ ವೇಳೆ ಜಿಪಂ ವಾಹನ ಚಾಲಕ  ಕೂಡ ಬೇಕ್ ಹಾಕಿದ್ದಾರೆ. ಅದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಶಂಸುದೀನ್ ಕೂಡ ಬೇಕ್ ಹಾಕಿದ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದರು. ಇದರಿಂದ ಕೋಪಗೊಂಡ ಆತ ದ್ವಿಚಕ್ರ ವಾಹನವನ್ನು ಕಾರಿಗೆ ಅಡ್ಡ ಗಟ್ಟಿ, ಕಾರಿನ ಮಿರರ್ ಅನ್ನು ಪುಡಿ ಮಾಡಿದ್ದಲ್ಲದೆ, ವಾಹನ ಚಾಲಕನನ್ನು ಹಾಗೂ ಮಹಿಳಾ ಅಧಿಕಾರಿಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ  ಸಜೀಪ ಕೊಣೆಮಾರ್ ನಿವಾಸಿ ಸಂಶುದೀನ್  ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು