ಇತ್ತೀಚಿನ ಸುದ್ದಿ
ಕೆನರಾ ಕಾಲೇಜಿನಲ್ಲಿ ಕೊಂಕಣಿ ಸರ್ಟಿಫಿಕೇಟ್ ಕೋರ್ಸ್: ಕೊಂಕಣಿ ಫೋಕ್ ಲೋರ್ ಅಂಡ್ ಡಾನ್ಸ್ ತರಬೇತಿಗೆ ಚಾಲನೆ
03/11/2023, 10:14

ಮಂಗಳೂರು(reporterkarnataka.com): ಕೆನರಾ ಕಾಲೇಜಿನಲ್ಲಿ ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲ ಕೆನರಾ ಕಾಲೇಜು ಹಾಗೂ ಕೊಂಕಣಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕೊಂಕಣಿ ಸ್ನಾತಕೋತ್ತರ ವಿಭಾಗ ಮಂಗಳೂರು ವಿಶ್ವವಿದ್ಯಾಲಯ ಇವುಗಳ ಜಂಟಿ
ಆಶ್ರಯದಲ್ಲಿ ಕೊಂಕಣಿ ಸರ್ಟಿಫಿಕೇಟ್ ಕೋರ್ಸ್, ಕೊಂಕಣಿ ಫೋಕ್ ಲೋರ್ ಅಂಡ್ ಡಾನ್ಸ್ ತರಬೇತಿಗೆ ಡಾ. ದೇವದಾಸ್ ಪೈ ಅವರು ದೀಪ ಬೆಳಗಿಸುವ ಮೂಲಕ ಚಾಲನೆಯನ್ನಿತ್ತರು.
“ಮೂಲತ: ಉತ್ತರ ಭಾರತದ ಸರಸ್ವತಿ ನದಿ ತೀರದವರಾದ ಗೌಡ ಸಾರಸ್ವತ ಬ್ರಾಹ್ಮಣರು ಗೋವಾದಲ್ಲಿ ನೆಲೆ ನಿಂತು ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನೆಲ್ಲ ಉಳಿಸಿ ಬೆಳೆಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ವ್ಯಾಪಾರದ ನೆಪವಿಟ್ಟುಕೊಂಡು ಭಾರತಕ್ಕೆ ಆಗಮಿಸಿದ ಪೋರ್ಚುಗೀಸರ ಆಕ್ರಮಣವನ್ನು ತಾಳಲಾರದೆ ಹೆದರಿ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳ ಬೇಕೆಂಬ ಮಹಾದಾಸೆಯಿಂದ ದಕ್ಷಿಣದ ಕರಾವಳಿ ಪ್ರದೇಶದಲ್ಲಿ ನೆಲೆ ನಿಂತರು. ಇಂದಿಗೂ ಇವರು ತಮ್ಮಆಚಾರ ವಿಚಾರ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಗಮನಾರ್ಹ “ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ. ಅವರು ಕೊಂಕಣಿ ಭಾಷೆಯಲ್ಲಿ ಎಂ.ಎ, ಪಿ ಎಚ್ ಡಿ ಪದವಿಯನ್ನು ಮಾಡಿದಲ್ಲಿ ವಿಪುಲ ವೃತ್ತಿಪರ ಅವಕಾಶಗಳು ಇರುವುದು. ಅದಕ್ಕೆ ಇಂತಹ ಸರ್ಟಿಫಿಕೇಟ್ ಕೋರ್ಸ್ ಸ್ಪೂರ್ತಿದಾಯಕವಾಗುವುದು ಎಂದು ನುಡಿದರು.
ಶ್ವೇತಾ ಕಾಮತ್ ಪ್ರಾರ್ಥಿಸಿದರು. ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಲ ಹಾಗೂ ಕೊಂಕಣಿ ಕೋರ್ಸ್ ಸಂಯೋಜಕಿಯಾದ ಸುಜಾತಾ ಜಿ.ನಾಯಕ್ ಸ್ವಾಗತಿಸಿದರು. ಸಹ ಸಂಯೋಜಕಿ ಕೀರ್ತನಾ ಎಂ. ಭಟ್ ಅವರು ವಂದಿಸಿದರು. ವರದರಾಜ ಭಕ್ತ ಕಾರ್ಯಕ್ರಮ ನಿರೂಪಿಸಿದರು.