7:38 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಕೆನರಾ ಕಾಲೇಜಿನ ವತಿಯಿಂದ ಕೋವಿಡ್ 19 ಸಂದರ್ಭದಲ್ಲಿ ಒತ್ತಡ ನಿರ್ವಹಣೆ ಕುರಿತು ಆನ್ಲೈನ್ ಕಾರ್ಯಾಗಾರ

27/05/2021, 22:59

ಮಂಗಳೂರು(Reporterkarnatkanews): ಕೆನರಾ ಕಾಲೇಜು, ಮಂಗಳೂರು ಇದರ ರಾಷ್ಟ್ರೀಯ ಸೇವಾ ಯೋಜನೆಯು “ಕೋವಿಡ ೧೯ ರ ಸಂದರ್ಭದಲ್ಲಿ ಒತ್ತಡ ನಿರ್ವಹಣೆ ” ಎಂಬ ಕಾರ್ಯಾಗಾರವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ,ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ, ಬೆಂಗಳೂರು ಮತ್ತು ಯುವ ಸ್ಪಂದನ ಕೇಂದ್ರ, ಮಂಗಳೂರು ಇವರ ಸಹಯೋಗದಿಂದ ಆನ್ಲೈನ್ ಮೂಲಕ ಜರುಗಿತು.

ವಿವೇಕಾನಂದ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀನಾಥ ಬಿ ಕಾರ್ಯಾಗಾರದ ಮುಖ್ಯ ಅತಿಥಿಯಾಗಿದ್ದರು.ಅವರು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ, ಆತ್ಮ ವಿಶ್ವಾಸ ಮತ್ತು ಉತ್ತಮ ಆರೋಗ್ಯ ದಿಂದ ದೈನಂದಿನ ಒತ್ತಡವನ್ನು ಕಡಿಮೆಮಾಡಿಕೊಳ್ಳ ಬಹುದು. ಯುವಕರಾದ ತಾವುಗಳು ಕೋವಿಡ ೧೯ ಸಂದರ್ಭದಲ್ಲಿ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರು ಇದರ ಜೀವನ ಕೌಶಲ್ಯ ತರಬೇತುದಾರ, ಶ್ರೀ ಕಾಂತ ಪೂಜಾರಿ, ಬಿರಾವು ಮಾತನಾಡಿ “ದೀರ್ಘಕಾಲೀನ ಒತ್ತಡ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿತ್ಯದ ಜೀವನಶೈಲಿ ಸೃಷ್ಟಿಸುವ ಒತ್ತಡ ಮನೋದೈಹಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದರ ಪರಿಣಾಮ ಜೀವನಶೈಲಿ ಸಂಬಂಧಿಸಿದ ಕಾಯಿಲೆಗಳ ಪ್ರಮಾಣ ದಿನೇದಿನೆ ಹೆಚ್ಚುತ್ತಿವೆ. ಒತ್ತಡದಿಂದ ಉಂಟಾಗುವ ಕಾಯಿಲೆಗಳಿಂದ ದೂರವಿರಲು ಪ್ರಾಥಮಿಕ ಹಂತದಲ್ಲೇ ಒತ್ತಡವನ್ನು ನಿಭಾಯಿಸಿ.ಒತ್ತಡಕ್ಕೆ ಒಳಗಾದಾಗ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಿ.ಮಾನಸಿಕ ಮತ್ತು ದೈಹಿಕವಾಗಿ ಆಗಾಗ ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ.
ಬಿಡುವಿನ ಸಮಯದಲ್ಲಿ ಯಾವುದಾದರೂ ಸೃಜನಶೀಲ ಮತ್ತು ಮನಸ್ಸಿಗೆ ಮುದ ಮತ್ತು ತೃಪ್ತಿಯನ್ನು ನೀಡುವ ಕೆಲಸಗಳಲ್ಲಿ ತೊಡಗಿಕೊಳ್ಳಿ.ಪ್ರತಿಯೊಬ್ಬರನ್ನು ನಗು-ನಗುತ್ತಾ ಆತ್ಮೀಯತೆಯಿಂದ ಮಾತನಾಡಿ ದ್ವೇಷ ಭಾವನೆಯನ್ನು ನಮ್ಮಿಂದ ತೆಗೆದು ಹಾಕಿ ಪ್ರತಿಯೊಬ್ಬರಲ್ಲೂ ಸ್ನೇಹ ಭಾವನೆಯನ್ನು ಹೊಂದುವುದು.
ಧ್ಯಾನ ಮಾಡುವಂಥದ್ದು ಮುಖ್ಯ. ಕನಿಷ್ಠ 5 ನಿಮಿಷಗಳವರೆಗಾದರೂ ದೀರ್ಘವಾಗಿ ಉಸಿರಾಡಿ.” ಎಂದು ಸಲಹೆ ನೀಡಿದರು. ಸ್ವಯಂಸೇವಕರಿಗೆ ಹಲವು ಚಟುವಟಿಕೆಗಳನ್ನು ನೀಡಿ ಉತ್ಸಾಹದಿಂದ ಭಾಗವಹಿಸುವಂತೆ ಮಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ. ಅವರು ಕೋವಿಡ್-೧೯ ಸಮಯದಲ್ಲಿ ಮನಸ್ಥಿತಿಯನ್ನು ಶಾಂತ ರೀತಿಯಿಂದ ಇರಿಸಿಕೊಳ್ಳಲು ವಿಧವಿಧವಾದ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳಬೇಕೆಂಬ ತಿಳುವಳಿಕೆಯ ನುಡಿಗಳ್ಳನ್ನಾಡಿದರು.

ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಸೀಮಾ ಪ್ರಭು.ಎಸ್ ಕಾರ್ಯಾಗಾರದ ಆಯೋಜಕರಾಗಿದ್ದರು. ಸ್ವಯಂ ಸೇವಕಿ ಯುಕ್ತ ಕರ್ಕೇರ ಕಾರ್ಯಕ್ರಮ ನಿರ್ವಹಿಸಿದರು. ಸ್ವಯಂಸೇವಕಿ ದಿವ್ಯಶ್ರೀ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು