ಇತ್ತೀಚಿನ ಸುದ್ದಿ
ಕೆನರಾ ಕಾಲೇಜಿನಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ; 600 ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್
30/06/2021, 22:34
ಮಂಗಳೂರು (reporterkarnataka): ದ.ಕ. ಜಿಲ್ಲಾಡಳಿತ ಹಾಗೂ ರಾ.ಸೇ.ಯೋ ಸಹಭಾಗಿತ್ವದಲ್ಲಿ ಉಚಿತ ಲಸಿಕಾ ಅಭಿಯಾನವು ಕೆನರಾ ಕಾಲೇಜು ಹಾಗೂ ಕೆನರಾ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗಾಗಿ ಬುಧವಾರ ಕಾಲೇಜಿನಲ್ಲಿ ಜರುಗಿತು.
ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ. ಧನಶ್ರೀ ಅಭಿಯಾನವನ್ನು ಉದ್ಘಾಟಿಸಿದರು. ಕೆನರಾ ಸಮೂಹ ಸಂಸ್ಥೆಗಳ ಖಜಾಂಜಿ ಸಿ.ಎ. ಶ್ರೀ ಎಂ. ವಾಮನ ಕಾಮತ್, ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ., ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಲಾ, ಕೆನರಾ ಸಮೂಹ ಸಂಸ್ಥೆಯ ಶ್ರೀ ಗುರುದತ್ತ ಭಾಗವತ್, ಐಕ್ಯೂಎಸಿ ಸಂಯೋಜಕಿ ದೇಜಮ್ಮ ಎ., ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಸೀಮಾ ಪ್ರಭು ಎಸ್. ಮುಂತಾದವರು ಉಪಸ್ಥಿತರಿದ್ದರು. ಸುಮಾರು 600 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಕೋವಿಡ್ ೧೯ ಲಸಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ನ ಘಟಕ ಹಾಗೂ ರಾ.ಸೇ.ಯೋ ಸ್ವಯಂ ಸೇವಕರು ಅಭಿಯಾನಕ್ಕೆ ಸಹಕಾರಿಯಾಗಿದ್ದರು.