ಇತ್ತೀಚಿನ ಸುದ್ದಿ
ನಮ್ಮ ಸಚಿವರು, ಶಾಸಕರು ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗದೆ ಕೇಶವ ಕೃಪಾಕ್ಕೆ ಹೋಗಲಾಗುತ್ತಾ?: ಮಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ
22/02/2025, 17:48

ಮಂಗಳೂರು(reporterkarnataka.com); ಕಾಂಗ್ರೆಸ್ ಶಾಸಕರು, ಸಚಿವರು ನಮ್ಮ ಹೈಕಮಾಂಡ್ ನಾಯಕರನ್ನು ಭೇಟಿಯಾಗದೆ ಕೇಶವ ಕೃಪಾಕ್ಕೆ ಹೋಗಲಾಗುತ್ತದಾ? ಮೋದಿಯವರನ್ನು, ನಡ್ಡಾ ಅವರನ್ನು ಭೇಟಿಯಾಗಲಾಗುತ್ತದಾ ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಜತೆ ಮಾತನಾಡಿದ ಅವರು, ಮೂವರು ಕಾಂಗ್ರೆಸ್ ಸಚಿವರು ಹೈಕಮಾಂಡ್ ಭೇಟಿಯಾದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ನಮ್ಮ ಸಚಿವರು, ಶಾಸಕರು ನಮ್ಮ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಖರ್ಗೆ, ರಾಹುಲ್ ಗಾಂಧಿ ಅವರನ್ನು ಭೇಟಿಯಾದಲ್ಲಿ ತಪ್ಪೇನಿದೆ ಎಂದರು.
ಗೃಹಲಕ್ಷ್ಮೀ ಬಗ್ಗೆ ಕೇಳಲಾದ ಪ್ರಶ್ನಿಗೆ ಉತ್ತರಿಸಿದ ಅವರು, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಮಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ವಾರದೊಳಗೆ ಗೃಹಲಕ್ಷ್ಮೀ ಹಣ ಹಾಕಯವುದಾಗಿ ಹೇಳಿದ್ದಾರೆ. ವಿಳಂಬವಾಗಿರುವುದು ನಿಜ. ಆದರೆ, ವಾರದೊಳಗೆ ಹಣ ಹಾಕುವುದಾಗಿ ಹೇಳಿದ್ದಾರೆ. ಆದರೆ, ಬಿ
ಬಿಟ್ಟಿ ಯೋಜನೆ ಎಂದು ಟೀಕಿಸಿದ ಬಿಜೆಪಿಯರಿಗೆ ಇದೆಲ್ಲ ಯಾಕೆ ಬೇಕು? ಅವರ ಕಾರ್ಯಕರ್ತೆಯರು ಕೂಡ ಗೃಹಲಕ್ಷ್ಮೀ ಹಣ ಪಡೆಯುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ. ಕೆಪಿಸಿಸಿ ಅಧ್ಯಕ್ಷರ, ಮುಖ್ಯಮಂತ್ರಿಗಳ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದರು.