ಇತ್ತೀಚಿನ ಸುದ್ದಿ
ಕೇಂಬ್ರಿಡ್ಜ್ ಸ್ಕೂಲ್ ನ ಕನ್ನಡ ಶಿಕ್ಷಕಿ ಸಪ್ನಾ ಕ್ರಾಸ್ತಾಗೆ ಪರೀಕ್ಷಾ ಸ್ಫೂರ್ತಿ ಗುರು ಶ್ರೇಷ್ಠ ಪ್ರಶಸ್ತಿ
12/08/2025, 23:08

ಮಂಗಳೂರು(reporterkarnataka.com): ನಗರದ ಪಾಲ್ದಾನೆಯ ಕೇಂಬ್ರಿಡ್ಜ್ ಸ್ಕೂಲ್ ನ ಕನ್ನಡ ಶಿಕ್ಷಕಿ ಸಪ್ನಾ ಕ್ರಾಸ್ತಾ ಅವರಿಗೆ ಪರೀಕ್ಷಾ ಸ್ಫೂರ್ತಿ ಫೌಂಡೇಶನ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ 2025ನೇ ಸಾಲಿನ ಪರೀಕ್ಷಾ ಸ್ಫೂರ್ತಿ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಕೇಂದ್ರೀಯ ಪಠ್ಯಕ್ರಮ (ಸಿಬಿಎಸ್ಇ) ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪ್ರೇಮ ಕಲಿಸಿ, ಹತ್ತನೆಯ ತರಗತಿ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣಾಂಕ ಗಳಿಸಲು ಅತ್ಯುತ್ತಮ ಬೋಧನೆಯ ಜೊತೆಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.