ಇತ್ತೀಚಿನ ಸುದ್ದಿ
ಬೈಂದೂರು: ಕೆಲಸಕ್ಕೆ ಬಂದ ಪರಿಚಿತ ಮೇಸ್ತ್ರಿಯಿಂದ 1.20 ಲಕ್ಷ ಮೌಲ್ಯದ ಕರಿಮಣಿ ಸರ ಕಳವು
20/02/2023, 00:02
ಬೈಂದೂರು(reporter Karnataka.com): ಮನೆಗೆ ಬಂದ ಪರಿಚಿತ ವ್ಯಕ್ತಿ ಕೋಣೆಯ ಪೆಟ್ಟಿಗೆಯಲ್ಲಿ ಇಟ್ಟಿದ್ದ ಕರಿಮಣಿ ಸರವನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೈಂದೂರಿನ ಕಾಲ್ತೋಡು ಗ್ರಾಮದ ಯಡೇರಿ ಗುರಮಕ್ಕಿ ಎಂಬಲ್ಲಿ ನಡೆದಿದೆ.
ಕಾಲ್ತೋಡು ಗ್ರಾಮದ ಸುರೇಂದ್ರ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಸುಮಾರು 3 ತಿಂಗಳ ಹಿಂದೆ ಮಹಾಂತೇಶ್ ಎಂಬಾತನನ್ನು ಮನೆಯ ಮೇಲ್ಮಾವಣಿಯ ಅಡ್ಡಗೋಡೆ ಕಟ್ಟಲು ಮತ್ತು ಗಾರೆ ಕೆಲಸ ಮಾಡಲು ಮನೆಗೆ ಕರೆಯಿಸಿಕೊಂಡಿದ್ದರು. ಮನೆ ಕೆಲಸ ಮುಗಿದ ಬಳಿಕ ಹಣ ನೀಡಿ ಕಳುಹಿಸಿದ್ದರು. ಆದರೆ ಮತ್ತೆ ಮನೆಗೆ ಬಂದ ಮಹಾಂತೇಶನು ಸುರೇಂದ್ರ ಅವರ ತಂಗಿಯ ಕೋಣೆಯ ಪೆಟ್ಟಿಗೆಯಲ್ಲಿಟ್ಟಿದ್ದ 1,20 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿದ್ದಾನೆ ಎಂದು ಸುರೇಂದ್ರ ಪೂಜಾರಿ ದೂರಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














