5:58 AM Sunday19 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರ ಸಮ್ಮತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ…

ಇತ್ತೀಚಿನ ಸುದ್ದಿ

ಬಸ್ ನಿಲುಗಡೆಗೆ ಆಗ್ರಹಿಸಿ ಕಾಗವಾಡ- ವಿಜಯಪುರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ: 4 ತಾಸು ಸಂಚಾರ ತಡೆ

29/05/2023, 17:33

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ ಖೋತ ಕ್ರಾಸ್ ಮೂಲಕ ಸಂಚರಿಸುವ ಎಲ್ಲ ಘಟಕದ ಬಸ್‌ಗಳನ್ನು ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಕಾಗವಾಡ-ವಿಜಯಪುರ ಹೆದ್ದಾರಿ ಬಂದ್ ಮಾಡಿ ಗ್ರಾಮಸ್ಥರು ಸುಮಾರು 4 ಗಂಟೆ ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರ ಸಂತೋಷ ಕದಂ ಮಾತನಾಡಿ, ಖೋತನಟ್ಟಿ ಕ್ರಾಸ್ ನಲ್ಲಿ ಬಸ್‌ ನಿಲ್ಲಿಸದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಮೇ 10ರಂದು ನಡೆದ ವಿಧಾನಸಭೆ ಚುನಾವಣೆ ಬಹಿಷ್ಕರಿಸುವ ಕುರಿತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದಾಗ ಎರಡು ಬಾರಿ ಆಗಮಿಸಿ ಸಂಧಾನ ಸಭೆ ನಡೆಸಿ ಕೆಎಸ್‌ಆ‌ರ್ ಟಿಸಿ ಅಧಿಕಾರಿಗಳು ಹಾಗೂ ತಹಸೀಲ್ದಾರರು ಬಸ್‌ ನಿಲ್ಲಿಸುವ ಆದೇಶ ಹೊರಡಿಸಿದ್ದರಿಂದ ಮತದಾನ ಮಾಡಿದ್ದೇವೆ.

ಇದೀಗ ಅಥಣಿ, ಚಿಕ್ಕೋಡಿ ಮತ್ತು ಬೆಳಗಾವಿ ಘಟಕದ ಬಸ್‌ಗಳು ಮಾತ್ರ ನಿಲ್ಲುತ್ತಿವೆ. ವಿಜಯಪುರ ಘಟಕದ ಬಸ್ ನಿಲ್ಲಿಸುವಂತೆ ವಿಜಯಪುರ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರೊಂದಿಗೆ ದೂರವಾಣಿ ಕರೆ ಮೂಲಕ ವಿಷಯ ತಿಳಿಸಿ ಮನವರಿಕೆ ಮಾಡಿದಾಗ ನಾಳೆಯಿಂದಲೇ ಬಸ್ ನಿಲುಗಡೆಗೊಳಿಸಲಾಗುವುದು ಹಾಗೂ ಕಂಟ್ರೋಲ್‌ರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು