ಇತ್ತೀಚಿನ ಸುದ್ದಿ
ಬಸ್ ಚಾಲಕ -ನಿರ್ವಾಹಕ, ದ್ವಿಚಕ್ರ ವಾಹನ ಸವಾರರಿಗೆ ಜೀವ ಉಳಿಸೋ ಪಾಠ: ಕದ್ರಿ ಠಾಣೆ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ರಿಂದ ಮತ್ತೆ ಹಿತವಚನ
07/11/2023, 16:40

ಮಂಗಳೂರು(reporterkarnataka.com): ನಗರದ ಕದ್ರಿ ಠಾಣಾ ಇನ್ಸ್ಪೆಕ್ಟರ್ ಗೋಪಾಲ ಕೃಷ್ಣ ಭಟ್ ಅವರು ಮತ್ತೆ ಬಸ್ ಚಾಲಕ ನಿರ್ವಾಹಕ, ದ್ವಿಚಕ್ರ ವಾಹನ ಸವಾರರಿಗೆ ಜೀವ ಉಳಿಸೋ ಪಾಠ ಹೇಳಿದ್ದಾರೆ. ಜೀವ ರಕ್ಷಣೆ ನಮ್ಮ ಕೈಯಲ್ಲೇ ಇದೆ ಎಂಬ ಸಂದೇಶ ಸಾರಿದ್ದಾರೆ.
ನಗರ ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಸ್ ಚಾಲಕ,ನಿರ್ವಾಹಕರಿಗೆ ಪ್ರಯಾಣಿರು ಎಲ್ಲೆಂದರಲ್ಲಿ ಬಸ್ ನಿಲ್ಲಿಸಬಾರದು, ಬಸ್ ಸ್ಟಾಪ್ ನಲ್ಲೆ ನಿಲ್ಲಿಸಬೇಕು ಎಂಬ ಕಿವಿಮಾತನ್ನು ಸಬ್ ಇನ್ಸ್ ಪೆಕ್ಟರ್ ನೀಡಿದ್ದಾರೆ.
ಬಸ್ ಹತ್ತುವಾಗ, ಇಳಿಯುವಾಗ ಪ್ರಯಾಣಿಕರು ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ನಿಮ್ಮ ಮನೆಯ ಸದಸ್ಯರಂತೆ ಭಾವಿಸಿ ಎಂದು ಚಾಲಕ ಹಾಗೂ ನಿರ್ವಾಹಕರಿಗೆ ಕಿವಿ ಮಾತು ಹೇಳಿದ್ದಾರೆ.
ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷಿತ ಹೆಲ್ಮೆಟ್ ಧರಿಸುವತೆ, ಆದಷ್ಟು ಶೂ ಧರಿಸುವಂತೆ, ಜಾರುವ ಚಪ್ಪಲಿ ಚಲಾವಣೆಯ ವೇಳೆ ಕಡಿಮೆ ಮಾಡಿ ನಿಮ್ಮ ಸುರಕ್ಷತೆ ಕಾಪಾಡಿ, ಪಾದಾಚಾರಿಗಳ ಮೇಲು ಗಮನವಿರಲಿ, ವೇಗವಾಗಿ ಚಲಿಸದೆ,ಗಮನ ಚಾಲನೆಯ ಮೇಲಿರಲಿ. ದಿನ ಚಲಾವಣೆಯನ್ನು ಆನಂದಿಸುವ ಮನಸ್ಸು ಬೆಳೆಸಿಕೊಳ್ಳಿ,
ಮನೆಯಲ್ಲಿ ನಿಮಗಾಗಿ ಕಾಯುವ ಪ್ರೀತಿಯ ಜೀವವನ್ನು ನೆನೆಸಿಪಿಸಿಕೊಳ್ಳಿ ಎಂದು ಜೀವನ ಮೌಲ್ಯವನ್ನು ತಿಳಿಸಿದರು.