ಇತ್ತೀಚಿನ ಸುದ್ದಿ
ಬಸ್ – ಬೈಕ್ ಅಪಘಾತ: ಪಾರ್ಟ್ ಟೈಮ್ ಫುಡ್ ಡೆಲಿವರಿ ಮಾಡುತ್ತಿದ್ದ ವಿದ್ಯಾರ್ಥಿ ದಾರುಣ ಸಾವು
03/03/2024, 11:35

ಮಂಗಳೂರು(reporterkarnataka.com): ನಗರದ ಕಂಕನಾಡಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತ ಯುವಕನನ್ನು ಮಂಗಳೂರಿನ ಖಾಸಗಿ ಕಾಲೇಜಿವೊಂದರ
ವಿಧ್ಯಾರ್ಥಿ ಸಿನಾನ್ (21) ಎಂದು ಗುರುತಿಸಲಾಗಿದೆ.
ಪಾರ್ಟ್ ಟೈಮ್ ಆಗಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಸಿಯಾನ್ ಸಂಚರಿಸುತ್ತಿದ್ದ ಬೈಕ್ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಈ ದುರ್ಘಟನೆ ನಡೆದಿದೆ.
ಸಿನಾನ್ ಮೂಲತಃ ಚಾರ್ಮಾಡಿ ಸಮೀಪದ ನಿವಾಸಿ.
ಬಡಕುಟುಂಬದ ಸಿನಾನ್ ವಿದ್ಯಾಭ್ಯಾಸಕ್ಕಾಗಿ ಪಾರ್ಟ್ ಟೈಮ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.