ಇತ್ತೀಚಿನ ಸುದ್ದಿ
ಬುದ್ದಿಮಾಂಧ್ಯೆ ಮೇಲೆ ಅತ್ಯಾಚಾರಕ್ಕೆ ಯತ್ನ: ಬಸ್ ಚಾಲಕ 66ರ ಹರೆಯದ ವೃದ್ಧನ ಬಂಧನ
07/09/2022, 20:36
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಎನ್.ಆರ್.ಪುರ ಪಟ್ಟಣ ವ್ಯಾಪ್ತಿಯಲ್ಲಿ ಬುದ್ದಿಮಾಂಧ್ಯೆ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವೃದ್ಧರೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಶಾಲೆಯ ಬಸ್ ಚಾಲಕ ತಾಲ್ಲೂಕಿನ ಮಲ್ಲಂದೂರು ಗ್ರಾಮ ನಿವಾಸಿ ಸದಾಶಿವ ಶೆಟ್ಟಿ(66) ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಸದಾಶಿವ ಶೆಟ್ಟಿ ಪಟ್ಟಣದ ವ್ಯಾಪಿಯ ಬುದ್ಧಿಮಾಂಧ್ಯೆ 20ರ ಹರೆಯದ ಯುವತಿ ಮೇಲೆ ಮಂಗಳವಾರ ರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಯುವತಿ ಸಹೋದರಿ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.