9:42 AM Tuesday13 - May 2025
ಬ್ರೇಕಿಂಗ್ ನ್ಯೂಸ್
Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!!

ಇತ್ತೀಚಿನ ಸುದ್ದಿ

ಬಿಎಸ್ಸಿ ಓದಲು ಇಷ್ಟವಿಲ್ಲ; ಡೆತ್ ನೋಟು ಬರೆದಿಟ್ಟು ಸ್ವಗೃಹದಲ್ಲಿ ವಿದ್ಯಾರ್ಥಿ ನೇಣಿಗೆ ಶರಣು

05/12/2022, 21:59

ರಾಹುಲ್ ಅಥಣಿ ಬೆಳಗಾವಿ

info.reporterkarnataka.com

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ಬಿಎಸ್ಸಿ ಓದಲು ಇಷ್ಟವಿಲ್ಲವೆಂದು ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ.

ತಡರಾತ್ರಿಯಲ್ಲಿ ನೇಣಿಗೆ ಶರಣಾದ ನಿಂಗಣ್ಣಾ (ಉರ್ಪ ಮಾರುತಿ) ಚಿದಾನಂದ ನಾವ್ಹಿ ವಯಸ್ಸು 22 ಎಂದು ತಿಳಿದು ಬಂದಿದೆ.

ಈತ ಜಮಖಂಡಿಯ ಬಿಎಲ್ ಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ ಮೂರು ದಿನಗಳ ಹಿಂದಷ್ಟೇ ಸ್ವ ಗ್ರಾಮವಾದ ಯಲ್ಪಾರಟ್ಟಿಗೆ ಆಗಮಿಸಿದ್ದ. ಆದರೆ ನಿನ್ನೆ ತಮ್ಮ ಸ್ವಂತ ಮನೆಯಲ್ಲಿ ತಡರಾತ್ರಿ ಮನೆಯ ಮುಂದೆ ಇರುವ ಛಾವಣಿಯಲ್ಲಿ ಮಲಗಿಕೊಂಡಾಗ ನಿಂಗಣ್ಣಾ ,(ಉರ್ಪ ಮಾರುತಿ) ನೇಣಿಗೆ ಶರಣಾಗಿದ್ದಾನೆ. ಬೆಳಿಗ್ಗೆ ಎದ್ದು ತಂದೆ ತಾಯಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಡೇತ ನೋಟಿನಲ್ಲಿ ನನ್ನನು ಕ್ಷೇಮಿಸಿ ಬಿಡಿ,ನಂಗೆ BSC ಇಷ್ಟ ಇಲ್ಲ
ಮನಿ ಪರಿಸ್ಥಿತಿ ನೋಡಿ ನಾನೂ BSC ಮಾಡಿನಿ ಈಗ ನನಗೆ study pressure ಬಹಳ ಆಗೆತಿ. ಅದಕ್ಕೆ ನಾ ಸಾಯುತ್ತೆನೆ,Sorry papa Sorry mom ಎಂದು ಡೇತ್ ನೋಟ ಬರೆದಿಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಹಾರುಗೇರಿ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ ಖೋತ,ಸಿಬ್ಬಂದಿಗಳ ಜೊತೆಗೇ ಸ್ಥಳಕ್ಕೆ ಬೆಟ್ಟಿ ನೀಡಿ ಸ್ಥಳ ಪರಿಶೀಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಯುವಕನ ತಂದೆ ತಾಯಿಗಳಿಂದ ಮಾಹಿತಿ ಪಡೆದು ಪಂಚನಾಮೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು