ಇತ್ತೀಚಿನ ಸುದ್ದಿ
ಬೃಹತ್ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ
04/09/2022, 17:07

ಮಂಗಳೂರು(reporterkarnataka.com):ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಫಲ್ಗುಣಿ ಮತ್ತು ಯುವವಾಹಿನಿ ಕುಳೂರು ಘಟಕ, ಹಿಂದ್ ಕುಸ್ಟ್ ನಿವಾರಣ್ ಸಂಘ್ ಹಾಗೂ ರೆಡ್ ಕ್ರಾಸ್ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಡಾ.ಭರತ್ ಶೆಟ್ಟಿ ಅವರು ಉದ್ಘಾಟಿಸಿದರು.
ಕುಳೂರಿನ ಫಲ್ಗುಣಿ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಮಾಜ ಸೇವಾ ಸಂಘಟನೆಗಳ ಪ್ರಮುಖರು, ಆಯೋಜಕರು, ಗಣ್ಯರು ಉಪಸ್ಥಿತರಿದ್ದರು.