ಇತ್ತೀಚಿನ ಸುದ್ದಿ
ಬೃಹತ್ ಗಾಂಜಾ ಮಾರಾಟ ಜಾಲ ಬಯಲು: ವೈದ್ಯರು, ವೈದ್ಯಕೀಯ ವಿದ್ಯಾರ್ಥಿ ಗಳು ಸಹಿತ 10 ಮಂದಿ ಬಂಧನ; 15 ವರ್ಷಗಳಿಂದ ಬಿಡಿಎಸ್ ಕಲಿಯುತ್ತಿರುವ ಪೆಡ್ಲರ್!
11/01/2023, 16:40

ಮಂಗಳೂರು(reporterkarnataka.com): ನಗರದಲ್ಲಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವೈದ್ಯಾಧಿಕಾರಿ, ಸರ್ಜನ್ ಹಾಗೂ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದ್ದು, ಇವರಲ್ಲಿ ನಾಲ್ವರು ಯುವತಿಯರು ಕೂಡ ಸೇರಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಕಾರ್ಯಾಚರಣೆ ಕುರಿತು ಮಾಧ್ಯಮ ಜತೆ ಮಾತನಾಡಿದ ಪೊಲೀಸ್ ಕಮಿಷನರ್ ಎನ್ . ಶಶಿಕುಮಾರ್, ಮಂಗಳೂರಿನ ಬಂಟ್ಸ್ ಹಾಸ್ಟೇಲ್ ಬಳಿಯ ಅಪಾರ್ಟ್ಮೆಂಟ್ ವೊಂದರಲ್ಲಿ ಗಾಂಜಾ ಮಾರಾಟ ಮಾರಾಟದ ಮಾಹಿತಿ ಸಿಕ್ಕಿತ್ತು, ಗಾಂಜಾ ಪ್ರಕರಣದಲ್ಲಿ ನೀಲ್ ಕಿಶೋರಿಲಾಲ್ ರಾಮ್ ಜಿ ಷಾ ಎಂಬಾತನನ್ನು ಮೊದಲು ಬಂಧಿಸಲಾಗಿದೆ. ಈತ ಎನ್ಆರ್ ಐ ಪ್ರಜೆಯಾಗಿದ್ದು, ಈ ಕೋಟಾದಡಿಯಲ್ಲಿ ಡೆಂಟಲ್ ವಿದ್ಯಾರ್ಥಿಯಾಗಿದ್ದು 15 ವರ್ಷಗಳಿಂದಲೂ ಡೆಂಟಲ್ ಓದುತ್ತಿದ್ದಾನೆ.
ಆದರೂ ಆತ ಬಿಡಿಎಸ್ ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ಗಾಂಜಾ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ. ಈತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ನಗರದ ಪ್ರತಿಷ್ಠಿತ ವೈದ್ಯಕಿಯ ಕಾಲೇಜುಗಳಲ್ಲಿನ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳೂ ಗಾಂಜಾ ಮಾರಾಟ ಮತ್ತು ಸೇವನೆಯಲ್ಲಿ ತೊಡಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ನೀಲ್‌ಕಿಶೋರ್ ರಾಮ್‌ಜಿ ಷಾ (38), ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಕೇರಳ ಮೂಲಕ ಡಾ.ಸಮೀರ್ (32), ವೈದ್ಯಕೀಯ ಸರ್ಜನ್ ತಮಿಳುನಾಡಿನ ಡಾ.ಮಣಿಮಾರನ್ ಮುತ್ತು (28) , ವೈದ್ಯ ವಿದ್ಯಾರ್ಥಿನಿಯರಾದ ಕೇರಳದ ನದಿಯಾ ಸಿರಾಜ್ (24), ಮಹಾರಾಷ್ಟ್ರದ ಇರಾ ಬಾಸಿನ್ (23), ಪಂಜಾಬ್ ನ ರಿಯಾ ಚಡ್ಡಾ (22), ಆಂಧ್ರಪ್ರದೇಶದ ವರ್ಷಿಣಿ ಪ್ರಾಥಿ (26), ಚಂಡೀಘಡದ ಭಾನು ದಹಿಯಾ (27), ದೆಹಲಿ ಕ್ಷಿತಿಜ್ ಗುಪ್ತ (25) ಹಾಗೂ ಬಂಟ್ವಾಳ ತಾಲ್ಲೂಕಿನ ಮಾರಿಪಳ್ಳದ ಮಹಮ್ಮದ್ ರವೂಫ್ ಅಲಿಯಾಸ್ ಗೌಸ್ (34) ಅವರನ್ನು ಬಂಧನ ಮಾಡಲಾಗಿದೆ ಎಂದರು.