ಇತ್ತೀಚಿನ ಸುದ್ದಿ
ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಕಳವು
21/08/2022, 17:50
ಬ್ರಹ್ಮಾವರ(reporterkarnataka.com): ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಅನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಆ.20ರಂದು ಮಧ್ಯಾಹ್ನ ನಡೆದಿದೆ.
ಬ್ರಹ್ಮಾವರ ನಿವಾಸಿ ಹರೀಶ್ ಬೈಕ್ ಕಳೆದುಕೊಂಡ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ಬ್ರಹ್ಮಾವರ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ, ವಂಡ್ಸೆಗೆ ಹೋಗಿದ್ದರು. ಬಳಿಕ ವಾಪಸ್ಸು ಬಂದು ನೋಡಿದಾಗ ಬೈಲ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಬೈಕ್ ಹಾಗೂ ಅದರದಲ್ಲಿದ್ದ ಹೆಲ್ಮೆಟ್ ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಬೈಕ್ ನ ಅಂದಾಜುಮೌಲ್ಯ 25 ಸಾವಿರ ರೂ. ಆಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.