ಇತ್ತೀಚಿನ ಸುದ್ದಿ
ಬ್ರಹ್ಮಾವರ ಸಮೀಪದ ಕ್ಯಾಶ್ಯು ಇಂಡಸ್ಟ್ರೀಸ್ ಗೆ ಗುಜರಾತ್ ವ್ಯಾಪಾರಿಯಿಂದ 40 ಲಕ್ಷ ರೂ. ವಂಚನೆ: ದೂರು ದಾಖಲು
21/06/2021, 07:30
ಬ್ರಹ್ಮಾವರ(reporterkarnataka news): ಇಲ್ಲಿಗೆ ಸಮೀಪದ ಕರ್ಜೆಯ ಶ್ರೀ ಶಾಯಾ ಕ್ಯಾಶ್ಯುಸ್ ಸಂಸ್ಥೆಗೆ ಗುಜರಾತಿನ ವ್ಯಾಪರಿಯೊಬ್ಬರು ಸುಮಾರು 39,14,461 ರೂಪಾಯಿ ವಂಚಿಸಿದ ಪ್ರಕರಣ ನಡೆದಿದೆ.
ಗುಜರಾತಿನ ವ್ಯಾಪಾರಿ ವಚನ ರಾಮ್ ಹಾಜ ರಾಮ್ ಚೌಧುರಿ ಸುಮಾರು 99,95,604 ಮೌಲ್ಯದ ಗೇರು ಬೀಜ ಪಡೆದು ಅದರಲ್ಲಿ 61 ಲಕ್ಷ ರೂಪಾಯಿವರೆಗೆ ಹಣ ನೀಡಿ ಸುಮಾರು 39,14,461 ನೀಡದೆ ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಈ ಮುಂಚೆ ಈತ ಕ್ಯಾಶ್ಯು ಫ್ಯಾಕ್ಟರಿಯ ಮಾಲಕ ಪ್ರಶಾಂತ್ ಅವರಿಗೆ ನಂಬಿಕೆ ಬರುವಂತೆ ಜಯಮಹಾದೇವ್ ಟ್ರೇಡಿಂಗ್ ಕಂಪೆನಿಯ ಹೆಸರಿನಲ್ಲಿ 26,86,574/- ವ್ಯವಹಾರ ನಡೆಸಿ ಹಣ ಪಾವತಿಸಿ ನಂಬಿಕೆ ಹುಟ್ಟಿಸಿದ್ದಾನೆ. ಇದೀಗ ಬರೊಬ್ಬರಿ 39,14,461 ಪಂಗನಾಮ ಹಾಕಿ ಪರಾರಿಯಾಗಿದ್ದು, ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.