ಇತ್ತೀಚಿನ ಸುದ್ದಿ
ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿರುವ ಲಕ್ಷ್ಮಿನಾರಾಯಣರ ಚಿಕಿತ್ಸೆಗೆ ನೆರವಾಗುವಿರಾ?
17/04/2023, 09:23
ಮಂಗಳೂರು(reporterkarnataka.com): ಲಕ್ಷ್ಮಿನಾರಾಯಣ ಅವರು ಮಂಗಳೂರು ತಾಲೂಕಿನ ಪುನರೂರು ಗ್ರಾಮದ ನಿವಾಸಿಯಾಗಿದ್ದು ಅವರು ಹಿಂದೆ ರಿಸರ್ವ್ ಪೊಲೀಸ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಪ್ರಸಕ್ತ ಅಡುಗೆ ಕೆಲಸ, ಸಭೆ ಸಮಾರಂಭದ ಕಾರ್ಯಕ್ರಮಗಳಲ್ಲಿ ಬಡಿಸುವ ಕೆಲಸ ನಿರ್ವಹಿಸಿ ಆಗಿ ಬದುಕು ಸಾಗಿಸುತ್ತಿದ್ದರು. ನಯವಿನಯತೆ ಕೂಡಿದ ಸದ್ಗುಣ ರಾಗಿದ್ದ ಅವರು ಇತ್ತೀಚೆಗೆ ವಿಧಿಯ ಕ್ರೂರ ದೃಷ್ಟಿಯಿಂದ ಏಕಾಏಕಿ ದೇಹದ ಒಂದು ಭಾಗದಲ್ಲಿ ಸ್ವಾಧಿನತೆ ಕಳೆದು ಕೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾದರು. ಕೆಲವು ದಿನಗಳ ಚಿಕಿತ್ಸೆಯ ಬಳಿಕ ಗುಣಮುಖವಾಗಿ ಆಹಾರ ಸೇವಿಸುತ್ತಿದ್ದರು. ಈ ಮದ್ಯೆ ಕೆಲದಿನಗಳ ನಂತರ ದೇಹದಲ್ಲಿ ಬದಲಾವಣೆಯಾಗಿ ಅಹಾರ ಸೇವನೆ ಮಾಡಲು ಆಗದೆ ಮತ್ತೆ ತಲೆಯ ಒಳ ಭಾಗದಲ್ಲಿ ಬ್ರೈನ್ ಸ್ಟ್ರೋಕ್ ಆಗಿರುವ ಸಾದ್ಯತೆ ಬಗ್ಗೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು. ತಕ್ಷಣ ಲಕ್ಷ್ಮಿನಾರಾಯಣ ರವರ ಕುಟುಂಬ ಉನ್ನತ ಮಟ್ಟದ ಚಿಕಿತ್ಸೆಗಾಗಿ ವೈದ್ಯರಲ್ಲಿ ಮೊರೆ ಹೋದರು.ಚಿಕಿತ್ಸೆ ನೀಡುತ್ತಿರುವ ವೈದ್ಯರು ತಕ್ಷಣ
ಐಸಿಯು ಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡಿದರು. ಮಾಹಿತಿ ಪ್ರಕಾರ ಒಂದು ದಿನದ ಚಿಕಿತ್ಸೆಗೆ ಸುಮಾರು 60 ಸಾವಿರ ರೂಪಾಯಿ ವೆಚ್ಚವಾಗುತ್ತಿದೆ.ಈಗಾಗಲೇ ಕುಟುಂಬವು ಸುಮಾರು 4.5 ಲಕ್ಷ ರೂಪಾಯಿ ಖರ್ಚು ಮಾಡಿದೆ. ಇಬ್ಬರು ಮಕ್ಕಳ ಸಹಿತ ಇರುವ ಈ ಬಡ ಕುಟುಂಬ ಈಗಾಗಲೇ ತಾವು ಉಳಿಸಿದ ಹಣವನ್ನು ಚಿಕಿತ್ಸೆಗೆ ವ್ಯಯಿಸಿದೆ, ಮುಂದಕ್ಕೆ ಇನ್ನಷ್ಟು ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 6ರಿಂದ 8 ಲಕ್ಷ ರೂಪಾಯಿ ಖರ್ಚಾಗಬಹುದೆಂದು ವೈದ್ಯರು ತಿಳಿಸಿದ್ದು,ಈಗಾಗಲೇ ಆಸ್ಪತ್ರೆಯಲ್ಲಿ ಕಾಯಿಲೆ ಪ್ರಯುಕ್ತ ದಾಖಲಾಗಿ ಸಾಲ ಮೂಲವೆಂದು 4.5 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ .
ಇದರಿಂದಾಗಿ ಕುಟುಂಬ ಆರ್ಥಿಕವಾಗಿ ಕಂಗೆಟ್ಟಿದ್ದು ಸಹಾಯಕ್ಕಾಗಿ ದಾನಿಗಳ ನೆರವು ಬೇಡುತಿದೆ. ಕುಟುಂಬದ ಯಜಮಾನ ಖಾಯಿಲೆ ಬಿದ್ದು ಇದೀಗ ಸರಿಯಾಗಿ ಊಟ ಮಾಡಲು ಸಹ ತೊಂದರೆಯಾಗಿದೆ. ಈ ಕಾಯಿಲೆಯನ್ನು ಹೇಗೆ ಗುಣಪಡಿಸುವುದೆಂದು ದಿಕ್ಕು ಕಾಣದೆ ಕುಟುಂಬಸ್ಥರು ಕಂಗೆಟ್ಟು ಹೋಗಿದ್ದಾರೆ.
ಈ ಚಿಕಿತ್ಸೆಗೆ ಯಾವುದೇ ಆಯುಷ್ಮಾನ್ ಭಾರತ ಯೋಜನೆ, ಅಥವಾ ಸರಕಾರದ ಯಾವುದೇ ಯೋಜನೆಗಳ ಸೌಲಭ್ಯ ಸಾಧ್ಯವಿಲ್ಲವೆಂದು ಕೂಡ ಖಚಿತಪಟ್ಟಿದೆ. ವಿಮೆ ಕೂಡಾ ಇಲ್ಲ.ಹಾಗಾಗಿ ಈ ಬಡಜೀವವನ್ನು ಸಕಾಲಿಕ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಬದುಕಿಸಲು ಸಹೃದಯಿಗಳಾದ ನಿಮ್ಮನ್ನು ಬಿಟ್ಟರೆ ಬೇರೇ ಯಾರೂ ದಿಕ್ಕಿಲ್ಲ. ಆದ್ದರಿಂದ ನಿಮ್ಮಲ್ಲಿ ಕಳಕಳಿಯ ವಿನಂತಿ. ತಾವು ತಮ್ಮಿಂದಾದಷ್ಟು ಧನ ಸಹಾಯವನ್ನು ಗೀತಾ ರಾವ್ ಅವರ ಬ್ಯಾಂಕ್ ಖಾತೆಗೆ ಧನ ಸಹಾಯ ಮಾಡುವ ಮೂಲಕ ಈ ಮಾರಕ ಕಾಯಿಲೆಯಿಂದ ಗುಣಮುಖವಾಗಲು ನೆರವು ನೀಡಬೇಕೆಂದು ಅವರ ಧರ್ಮಪತ್ನಿ ಶ್ರೀಮತಿ ಗೀತಾ ರಾವ್ ಮತ್ತು ಮಕ್ಕಳು ಸಾರ್ವಜನಿಕರಲ್ಲಿ ಪ್ರಾರ್ಥಿಸಿದ್ದಾರೆ.
ದಾನಿಗಳು ಈ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಮನವಿ ಮಾಡಿದ್ದಾರೆ.
Phone pay : 8861823912@ybl
Ramya L.Rao.(ಮಗಳು)
OR
ಗೀತಾ ರಾವ್.
ಅವರ ಬ್ಯಾಂಕ್ ಖಾತೆ ವಿವರ :
GEETHA.L.RAO
Sb account number : 37570100018400
IFSC code :BARB0KINNIG (Fifth character is Zero)
Bank of Baroda, Kinnigoli branch.
Kinnigoli, Mangalore.Karnataka.