5:39 PM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಬಾಯ್ ಫ್ರೆಂಡ್ ಜತೆ ಸೇರಿ ಪತಿಯನ್ನು ಕೊಂದ ದುಷ್ಟ ಪತ್ನಿ: ವಾಮಾಚಾರ ಕಥೆ ಹೆಣೆದು ಲಾಕ್ ಆದ ಕಿಲ್ಲರ್ ಲೇಡಿ

04/11/2024, 19:06

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ವ್ಯಕ್ತಿಯ ಕತ್ತನ್ನ ಕೊಯ್ದು ನಿಗೂಢವಾಗಿ ಕೊಂದು ವಾಮಾಚಾರ ಕಥೆ ಹಣೆದು ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ದುಷ್ಟರು ಖಾಕಿ ಅತಿಥಿಗಳಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಹಾತೊರೆದ ಪತ್ನಿ ತನ್ನ ಬಾಯ್ ಫ್ರೆಂಡ್ ಗಳ ಜೊತೆ ಸೇರಿ ಪತ್ನಿಯನ್ನು ಭೀಕರವಾಗಿ ಕೊಂದು ವಾಮಾಚಾರಕ್ಕೆ ಬಲಿಯಾದಂತೆ ಬಿಂಬಿಸಿ ತನಿಖೆ ದಿಕ್ಕು ತಪ್ಪಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ರವರ ಸೂಕ್ತ ಮಾರ್ಗದರ್ಶನದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ರವರ ಉಸ್ತುವಾರಿಯಲ್ಲಿ ಡಿವೈಎಸ್ಪಿ ರಘು ಹಾಗೂ ಹುಲ್ಲಹಳ್ಳಿ ಪಿಐ ಮನೋಜ್ ಕುಮಾರ್,ಪಿಎಸ್ಸೈ ಚೇತನ್ ಕುಮಾರ್ ರವರ ನೇತೃತ್ವದಲ್ಲಿ ಹಂತಕರ ಬೆನ್ನುಹತ್ತಿದಾಗ ಕೊಲೆಗಡುಕರು ಸಿಕ್ಕಿಬಿದ್ದಿದ್ದಾರೆ. ಕೊಲೆಯಾದವನ ಪತ್ನಿ ರಾಜೇಶ್ವರಿ, ಸ್ನೇಹಿತರಾದ ಶಿವಯ್ಯ ಹಾಗೂ ರಂಗಸ್ವಾಮಿ ಪೊಲೀಸರ ಸೂಕ್ತ ತೆನಿಖೆಯಲ್ಲಿ ಸಿಕ್ಕಿಬಿದ್ದ ಹಂತಕರು.
ಸೆಪ್ಟೆಂಬರ್ 18ರಂದು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಡುವಿನಹಳ್ಳಿಯ ಸರ್ಕಾರಿ ಶಾಲೆ ಬಳಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ವ್ಯಕ್ತಿಯ ಕತ್ತನ್ನ ಕೊಯ್ದು ಬಿಸಾಡಲಾಗಿತ್ತು. ಸಮೀಪದಲ್ಲಿ ವಾಮಾಚಾರ ನಡೆಸಿದಂತೆ ನಿಂಬೆಹಣ್ಣ,101 ರೂ ಹಾಗೂ ಅರಿಶಿನ ಕುಂಕುಮ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ವಾಮಾಚಾರ ನಡೆಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಬಿಂಬಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಹುಲ್ಲಹಳ್ಳಿ ಠಾಣೆ ಪೊಲೀಸರು ನಿಗೂಢತೆಯನ್ನ ಭೇದಿಸಲು ಸಿಬ್ಬಂದಿಗಳಾದ ರಸೂಲ್ ಪಾಗೇವಾಲ, ಸತೀಶ್, ಅಬ್ದುಲ್ ಲತೀಫ್, ಭಾಸ್ಕರ್, ಅಶೋಕ್, ಶಿವಕುಮಾರ್, ದೊಡ್ಡಯ್ಯ, ಮಹಿಳಾ ಸಿಬ್ಬಂದಿಗಳಾದ ಆಶಾ ಹಾಗೂ ಶ್ರೀದೇವಿ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.ನಿಗೂಢ ಕೊಲೆಯ ರಹಸ್ಯ ಭೇಧಿಸಿದ ನಂಜನಗೂಡು ಖಾಕಿ ಪಡೆ ಹಂತಕರ ಸಂಚು ಬಯಲು ಮಾಡಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಸದಾಶಿವನನ್ನ ಪತ್ನಿ ರಾಜೇಶ್ವರಿ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಕೊಂದು ನಂತರ ವಾಮಾಚಾರಕ್ಕೆ ಬಲಿಯಾದಂತೆ ಬಿಂಬಿಸಿದ್ದರು. ತನಿಖೆಯಲ್ಲಿ ಕೊಲೆ ಕಾರಣ ತಿಳಿಸಿದ ಪತ್ನಿ ರಾಜೇಶ್ವರಿ ಇದೀಗ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಕಂಬಿ ಎಣಿಸುತ್ತಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು