9:14 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಬೊಂದೆಲ್ ಚರ್ಚ್ ಶಾಲಾ ವಠಾರದಲ್ಲಿ 16ನೇ ಸ್ಟ್ಯಾನ್ ನೈಟ್ ಸಂಪನ್ನ; ಸಂಗೀತ ಪ್ರೇಮಿಗಳಿಗೆ ರಸದೌತಣ

05/02/2024, 20:00

ಮಂಗಳೂರು(reporterkarnataka.com): ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ಆಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಮತ್ತು ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಪ್ರಸ್ತುತಪಡಿಸಿದ 16ನೇ ಸ್ಟ್ಯಾನ್ ನೈಟ್ ಕಾರ್ಯಕ್ರಮ ಭಾನುವಾರ ನಗರದ ಬೊಂದೆಲ್ ಶಾಲಾ ವಠಾರದಲ್ಲಿ ನಡೆಯಿತು.
ವೇದಿಕೆಯಲ್ಲಿ ಗಣ್ಯ ವ್ಯಕ್ತಿಗಳಾದ ವ| ಫಾ ಆಂಡ್ರ್ಯೂ ಲಿಯೋ ಡಿಸೋಜ, ರಾಯ್ ಕಾಸ್ಟೆಲಿನೊ” ಲುವಿ ಪಿಂಟೊ, ಜೋಸೆಫ್ ಮಾಥಾಯಸ್, ಆಲ್ವಿನ್ ರೊಡ್ರಿಗ್ಸ್” ಸ್ಟ್ಯಾನಿ ಮೆಂಡೊನ್ಸಾ, ಆಲ್ಫ್ರೆಡ್ ಬೆನ್ನಿಸ್ , ರವಿ ಪಿಂಟೊ, ಸಂತೋಷ್ ಸಿಕ್ವೆರಾ, ಆಂಡ್ರಿಯಾ ಸಿಕ್ವೆರಾ, ಡಾ ಪ್ರೀತಿ ಡಿಸೋಜ, ಜೊನ್ ಡಿ ಸಿಲ್ವಾ , “ಫೆಲಿಕ್ಸ್” ಮೊರಾಸ್ ಉಪಸ್ಥಿತರಿದ್ದರು.
ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ರೂ ಐದು ಲಕ್ಷ ಚೆಕ್ , ಆಲ್ಫ್ರೆಡ್ ಬೆನ್ನಿಸ್ ಹಾಗೂ ಸ್ಟ್ಯಾನಿ ಮೆಂಡೊನ್ಸಾ ವ| ಫಾ ಆಂಡ್ರ್ಯೂ ಲಿಯೋ ಡಿಸೋಜರವರಿಗೆ ಹಸ್ತಾಂತರ ಮಾಡಿದರು.
ಸಂಜೆ ಗಂಟೆ. 6.೦೦ರಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಹೆಸರಾಂತ ಗಾಯಕ-ಗಾಯಕಿರಿಂದ ಸಂಗೀತ ರಸಮಂಜರಿ, ಜೊಸ್ವಿನ್ ಪಪ್ವಾನರಿಂದ ಸಂಗೀತ , ಮೆಮರಿ ಮಂಗಳೂರು ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ಅರ್ಬನ್ ಗ್ರೂವ್ ಅವರಿಂದ ನೃತ್ಯ . ಒಂದೇ ವೇದಿಕೆಯಲ್ಲಿ ಪ್ರೇಕ್ಷಕರಿಗೆ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು . ಈ ಕಾರ್ಯಕ್ರಮವನ್ನು ಕೊಂಕಣಿ ಭಾಷಿಕರ ಹೆಸರಾಂತ ಕಾರ್ಯನಿರ್ವಾಹಕ ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮವು ಉಚಿತ ಪ್ರವೇಶವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು