ಇತ್ತೀಚಿನ ಸುದ್ದಿ
Bollywood Actress | ಬಾಲಿವುಡ್ ನಟಿ, ಸಂಸದೆ ಕಂ ಗನಾ ರಣಾವತ್ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ: ವಿಶೇಷ ಪೂಜೆ ಸಲ್ಲಿಕೆ
04/03/2025, 19:36

ಮಂಗಳೂರು(reporterkarnataka.com): ಖ್ಯಾತ ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಹಾಗೂ ಕಾಪು ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿ,
ನಿನ್ನೆ ಕಾಪು ಮಾರಿಗುಡಿ ಹಾಗೂ ಇಂದು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದೇನೆ. ತಾಯಿಯ ದರ್ಶನ ಪಡೆದಿದ್ದೇನೆ. ಬಹಳ ವರ್ಷಗಳಿಂದ ಈ ಭಾಗಕ್ಕೆ ಬರಬೇಕೆಂಬ ಅಭಿಲಾಷೆ ಇತ್ತು.
ತಾಯಿ ತನ್ನ ಆಶೀರ್ವಾದ ನೀಡಲು ಕರೆಸಿಕೊಂಡಿದ್ದಾಳೆ.
ಸನಾತನ ಧರ್ಮ ಸನಾತನ ಸಂಸ್ಕೃತಿಯ ಬಗ್ಗೆ ಜಾಗೃತಿ ಯಾಗಿದೆ. ದೇಶ ಉನ್ನತ ಪ್ರಗತಿಯತ್ತ ಸಾಗುತ್ತಿದೆ.
ನಮ್ಮ ಸನಾತನ ಧರ್ಮದ ಬಗ್ಗೆ ಜನರು ಜಾಗೃತರಾಗಿದ್ದಾರೆ ಎಂದರು.
ನಮ್ಮ ದೇವಾಲಯಗಳು ಕೇವಲ ದೇವರ ಆಲಯವಾಗಿ ಉಳಿದಿಲ್ಲ. ನಮ್ಮ ದೇವಾಲಯಗಳು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ.
ಆಸ್ಪತ್ರೆ, ಶಾಲೆ, ಆಶ್ರಮಗಳನ್ನು ನಡೆಸುತ್ತಿದೆ. ದೇವಾಲಯಗಳು ನಮ್ಮ ಸಾಂಸ್ಕೃತಿಕ ಪ್ರತಿಬಿಂಬ.
ಕುಂಭಮೇಳ, ಸನಾತನ ಧರ್ಮದ ಬಗ್ಗೆ ಅವಹೇಳನ ಟೀಕೆಗಳು ಮುಂದುವರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,ವ
ದೇವರ ಆರತಿ ಬೆಳಗುವಾಗ ದುಷ್ಟ ಶಕ್ತಿಗಳು ಉರಿದು ಹೋಗುತ್ತವೆ. ದೇವಿಯ ಅವತಾರಗಳು ಈ ದುಷ್ಟ ಶಕ್ತಿಗಳ ಸಂಹಾರಕ್ಕೆ ಆಗಿವೆ.
ಎಲ್ಲರ ಮೇಲೂ ಈಶ್ವರನ ಆಶೀರ್ವಾದವಿರಲಿ. ಟೀಕೆ ಮಾಡುವವರಿಗೆ, ಅವಹೇಳನ ಮಾಡಿದವರಿಗೆ ದೇವರು ಸದ್ಬುದ್ದಿ ಕೊಡಲಿ ಎಂದು ನಟಿ ನುಡಿದರು.